500 ರೂ.ಗಾಗಿ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಿದರು!
ಮಂಗಳೂರು, ಸೆ. 6: ಹ್ಯಾಂಡ್ ಬ್ಯಾಗ್‌ನ ಸೈಝ್‌ಗೆ ಸಂಬಂಧಿಸಿ ದಂಡ ಪಾವತಿಸಲು ನಗದು ಕಡಿಮೆ ಹೊಂದಿದ್ದ ಪ್ರಯಾಣಿಕರೋರ್ವರನ್ನು ಏರ್ ಇಂಡಿಯಾ ವಿಮಾನದ ಸಿಬ್ಬಂದಿ ಕೆಳಗಿಸಿದ ಘಟನೆ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉಡುಪಿ ಶಂಕರಪುರದ ನಿವಾಸಿ ವೆಲೇರಿಯನ್ ಮಥಾಯಿಸ್ ಎಂಬವರು ಇಂದು ಬೆಳಗ್ಗೆ 8:55ಕ್ಕೆ ಏರ್ ಇಂಡಿಯಾ ನಿಮಾನದಿಂದ ಮಂಗಳೂರಿನಿಂದ ಮಸ್ಕತ್‌ಗೆ ತೆರಳಬೇಕಾಗಿತ್ತು. ಮಥಾಯಿಸ್ ಅವರೇ ಹೇಳಿದಂತೆ, ಬೆಳಗ್ಗೆ 7:30ಕ್ಕೆ ಬೋರ್ಡಿಂಗ್ ವಿಮಾನ ನಿಲ್ದಾಣದ ಒಳಗೆ ಬೋರ್ಡಿಂಗ್ ಪಾಸ್ ಪಡೆದಿದ್ದೆ. ತಪಾಸಣೆಯ ಸಂದರ್ಭದಲ್ಲಿ ತನ್ನ ಹಾಂಡ್‌ಬ್ಯಾಗ್ ಕೂಡ ಹಾಕಲಾಗಿತ್ತು. ಆದರೆ, ತನ್ನ ಬಳಿ ಇದ್ದ ಹ್ಯಾಂಡ್ ಬ್ಯಾಗ್ ಒಂದೂವರೆ ಸೆಂ.ಮೀ.ನಷ್ಟು ದೊಡ್ಡದಿದ್ದುದರಿಂದ ವಿಮಾನ ಸಿಬ್ಬಂದಿಗಳು 1,500 ರೂ. ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ, ನಾನು ಕೇವಲ 1,000 ನಗದು ಮಾತ್ರ ಹೊಂದಿದ್ದು, ಉಳಿದ ಹಣವನ್ನು ಮತ್ತೆ ಕೊಡುವುದಾಗಿ ಹೇಳಿದೆ. ಇದಕ್ಕೆ ಒಪ್ಪದ ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ್ದಾರೆ ಎಂದು ಮಥಾಯಿಸ್ ತಿಳಿಸಿದ್ದಾರೆ.
ಮಥಾಯಿಸ್ ಅವರು ಕಳೆದ 20 ವರ್ಷಗಳಿಂದ ಮಸ್ಕತ್‌ನಲ್ಲಿ ವ್ಯಾಪಾರವನ್ನು ಮಾಡಿಕೊಂಡಿದ್ದು, ಇಂದು ಬೆಳಗ್ಗೆ ನನಗೆ ಮಸ್ಕತ್ ತಲುಪಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.