×
Ad

ಐದು ವರ್ಷಗಳಲ್ಲಿ ಎಲ್ಲರಿಗೂ ಮನೆ: ಕೇರಳ ಸರಕಾರ

Update: 2016-09-06 23:54 IST

ತಿರುವನಂತಪುರ,ಸೆ.6: ಅಧಿಕಾರಕ್ಕೇರಿ ನೂರು ದಿನಗಳನ್ನು ಪೂರೈಸಿರುವ ಕೇರಳದ ಎಡರಂಗ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಸಮಗ್ರ ವಸತಿ ಯೋಜನೆಯೊಂದರ ಮೂಲಕ ಮನೆ ಮತ್ತು ಭೂಮಿ ಇಲ್ಲದವರಿಗೆ ಮನೆಗಳನ್ನು ಒದಗಿಸಲು ಚಿಂತನೆ ನಡೆಸಿದೆ. 4.70 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಈ ಯೋಜನೆಯ ನೇರ ಲಾಭ ತಟ್ಟಲಿದೆ.

 ‘ಪ್ರಾಜೆಕ್ಟ್ ಲೈಫ್’ ಎಂದು ಹೆಸರಿಸಲಾಗಿರುವ ಈ ಯೋಜನೆಯನ್ನು ಸಾಕಾರಗೊಳಿಸಲು ಸರಕಾರದ ಹಣಕಾಸಿನೊಂದಿಗೆ ಅನಿವಾಸಿ ಕೇರಳೀಯರು, ಕಾರ್ಪೊರೇಟ್ ಗುಂಪುಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳು ಮತ್ತು ಸರಕಾರೇತರ ಸಂಸ್ಥೆಗಳಿಂದ ದೇಣಿಗೆಗಳನ್ನು ಕ್ರೋಡೀಕರಿಸುವ ಕಾರ್ಯಕ್ಕೆ ರಾಜ್ಯ ಸ್ಥಾಪನಾ ದಿನವಾದ ನ.1ರಂದು ಚಾಲನೆ ನೀಡಲು ಪಿಣರಾಯಿ ವಿಜಯನ್ ನೇತೃತ್ವದ ಸರಕಾರವು ನಿರ್ಧರಿಸಿದೆ.
ಅಧಿಕೃತ ಅಂಕಿಅಂಶಗಳಂತೆ ರಾಜ್ಯದಲ್ಲಿ 4.70 ಲಕ್ಷ ಕುಟುಂಬಗಳಿಗೆ ಮನೆಗಳಿಲ್ಲ. ಈ ಪೈಕಿ ಕೇವಲ 2.91 ಲಕ್ಷ ಕುಟುಂಬಗಳು ಮನೆ ನಿರ್ಮಾಣಕ್ಕೆ ಸಾಕಷ್ಟು ಜಾಗವನ್ನು ಹೊಂದಿವೆ. ಉಳಿದ 1.79 ಲಕ್ಷ ಕುಟುಂಬಗಳು ಮನೆಯನ್ನೂ ಹೊಂದಿಲ್ಲ,ಜಾಗವನ್ನೂ ಹೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News