ಅಕ್ರಮ ಮದ್ಯ: ಓರ್ವನ ಸೆರೆ
Update: 2016-09-06 23:56 IST
ಉಡುಪಿ, ಸೆ.6: ಕೊರಂಗ್ರಪಾಡಿ ಜೇಮ್ಸ್ ಗ್ಯಾರೇಜಿನ ಬಳಿ ರವಿವಾರ ರಾತ್ರಿ ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಓರ್ವನನ್ನು ಉಡುಪಿ ಪೊಲೀಸರು ಬಂಧಿಸಿದ್ದು, ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕೊರಂಗ್ರಪಾಡಿ ಮೇಲ್ಮನೆಯ ವಿಶ್ವನಾಥ ಶೆಟ್ಟಿ(34) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ಮದ್ಯದ ಮೌಲ್ಯ 7,000ರೂ. ಮತ್ತು 4ಲಕ್ಷ ರೂ. ವೌಲ್ಯದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.