×
Ad

ಅಕ್ರಮ ಮದ್ಯ ಮಾರಾಟ: ಇಬ್ಬರು ವಶ

Update: 2016-09-06 23:56 IST

ಉಪ್ಪಿನಂಗಡಿ, ಸೆ.6: ಇಲ್ಲಿನ ನೆಲ್ಯಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
 ಆಲಂತಾಯ ಅಂಜಿರದ ಅಶೋಕ (22) ಹಾಗೂ ಬಿಳಿಯೂರುಕಟ್ಟೆಯ ಮುಗೇರುಮನೆಯ ವಿಜಯ್(28) ಬಂಧಿತರು. ಚರಣ್ ಎಂಬಾತ ಈ ಸಂದರ್ಭ ಓಡಿ ಪರಾರಿಯಾಗಿದ್ದಾನೆ. ಸೆ.5ರಂದು ಗಣೇಶೋತ್ಸವದ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ರಾತ್ರಿ ನೆಲ್ಯಾಡಿಯ ಚರಣ್ ಬಾರ್‌ನ ಹಿಂಭಾಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ 7,500 ರೂ. ವೌಲ್ಯದ 21,960 ಲೀ. ಮದ್ಯ ಹಾಗೂ 390 ರೂ.ವನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಚರಣ್ ಎಂಬಾತನಿಗೆ ಶೋಧ ಕಾರ್ಯ ನಡೆಯುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News