ಇಬ್ಬರು ನೊಬೆಲ್ ತೀರ್ಪುಗಾರರಿಗೆ ಸ್ಥಾನ ಬಿಡಲು ಸೂಚನೆ

Update: 2016-09-07 03:17 GMT

ಪ್ರಮುಖ ನೈತಿಕ ಹಗರಣದ ಬಗ್ಗೆ ನೀಡಿದ ಎಚ್ಚರಿಕೆಯ ಬಗ್ಗೆ ಲಕ್ಷ್ಯ ನೀಡದ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ತೀರ್ಪುಗಾರರ ಸಮಿತಿಯ ಇಬ್ಬರು ನೊಬೆಲ್ ತೀರ್ಪುಗಾರರಿಗೆ ಸ್ಥಾನ ಬಿಡಲು ಸೂಚನೆ ನೀಡಿದ ಅಪರೂಪದ ಘಟನೆ ಮಂಗಳವಾರ ನಡೆದಿದೆ.

ಹ್ಯಾರಿಯೆಟ್ ವಿಲ್ಬರ್ಗ್ ಹಾಗೂ ಆಂಡರ್ಸ್ ಹ್ಯಾಮ್‌ಸ್ಟನ್ ಅವರಿಗೆ ಪದತ್ಯಾಗ ಮಾಡುವಂತೆ ಸೂಚಿಸಲಾಗಿದೆ ಎಂದು ನೊಬೆಲ್ ಅಸೆಂಬ್ಲಿ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಪ್ರಕಟಿಸಿದ್ದಾರೆ. "ಇದು ವಿಶ್ವಾಸದ ಸಮಸ್ಯೆ. ಇದು ಎಷ್ಟು ಗಂಭೀರವಾಗಿದೆ ಎಂದರೆ, ಅವರನ್ನು ಪದತ್ಯಾಗ ಮಾಡುವಂತೆ ಸೂಚಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಬ್ಬರೂ ಸ್ವೀಡನ್‌ನ ಅಗ್ರಗಣ್ಯ ವೈದ್ಯಕೀಯ ವಿಶ್ವವಿದ್ಯಾನಿಲಯ ಎನಿಸಿದ ಕರೋಲಿನ್‌ಸ್ಕಾ ಸಂಸ್ಥೆಯ ರೆಕ್ಟರ್‌ಗಳಾಗಿದ್ದರು.

ಈ ವಿವಾದ ಶ್ವಾಸನಾಳಕ್ಕೆ ಮೊಟ್ಟಮೊದಲ ಕೃತಕ ಟ್ರೆಚೆಯಾ ಅಳವಡಿಕೆಗೆ ಸಂಬಂಧಿಸಿದ್ದು. 2011ರಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾಲೊ ಮೆಚಿಯಾರಿನಿ ಪಾತ್ರರಾಗಿದ್ದರು. ಇದು ಪ್ಲಾಸ್ಟಿಕ್ ರಚನೆಯಾಗಿದ್ದು, ರೋಗಿಯ ಕೋಶದಲ್ಲಿ ಇದನ್ನು ಸೇರಿಸಲಾಗುತ್ತದೆ. ಇದು ಬಳಿಕ ವಿಶೇಷ ಕೋಶಗಳಾಗಿ ದೇಹದ ಅಂಗದಲ್ಲಿ ಬೆಳೆಯುತ್ತದೆ ಎನ್ನಲಾಗಿತ್ತು. ಈ ಇಬ್ಬರನ್ನು ಈ ವಿಶೇಷ ಶಸ್ತ್ರಚಿಕಿತ್ಸೆಗೆ ಕರೆಸಲಾಗಿತ್ತು. ಇವರು ನಡೆಸಿದ ಮೂರು ಶಸ್ತ್ರಚಿಕಿತ್ಸೆಗಳಲ್ಲಿ ಇಬ್ಬರು ಮೃತಪಟ್ಟರೆ ಮತ್ತೊಬ್ಬ ತೀವ್ರ ಅಸ್ವಸ್ಥನಾಗಿದ್ದ. ಇವರು ತಮ್ಮ ವೈದ್ಯಕೀಯ ಸಂಶೋಧನೆಯನ್ನು ಮುಚ್ಚಿಟ್ಟು, ಈ ಸಾಧನೆ ಮಾಡಿದ್ದಾಗಿ ಹೇಳಿಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News