×
Ad

ಭಾರತದಲ್ಲಿ ಐಫೋನ್ 7 ಲಭ್ಯವಾಗುವ ದಿನ, ಬೆಲೆ ಪ್ರಕಟ

Update: 2016-09-07 11:47 IST

ಹೊಸದಿಲ್ಲಿ, ಸೆ.7: ಆಪಲ್ ಕಂಪೆನಿ ತನ್ನ ನೆಕ್ಸ್ಟ್ ಜನರೇಶನ್ ಐಫೋನ್ 7 ಅನ್ನು ಭಾರತದಲ್ಲಿ ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಲಿದೆಯೆಂದು ತಿಳಿದು ಬಂದಿದೆ. ಈ ಐಫೋನ್ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸೆಪ್ಟೆಂಬರ್ 7 ರಂದು ಸ್ಯಾನ್ ಫ್ರಾನ್ಸಿಸ್ಕೋದ ಗ್ರಹಾಂಬೆಲ್ ಸಿವಿಕ್ ಸಭಾಂಗಣದಲ್ಲಿ ಬಿಡುಗಡೆಯಾಗಿದೆ.

ಐಫೋನ್ 7 ಬೇಸ್ ಮಾಡೆಲ್ (32 ಜಿಬಿ) ಆರಂಭಿಕ ಬೆಲೆ ಭಾರತದಲ್ಲಿ 63,000 ರೂ. ಆಗಬಹುದು ಎಂದು ಮೂಲಗಳು ತಿಳಿಸಿವೆ. ಸ್ಮಾರ್ಟ್‌ಫೋನ್ ಗಳಿಗೆ ವಿಶ್ವದ ಎರಡನೆ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ತನ್ನ ಐಫೋನ್ ಮಾರಾಟಕ್ಕೆ ಆಪಲ್ ಹೆಚ್ಚಿನ ಗಮನ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ಒಂಬತ್ತು ತಿಂಗಳುಗಳಲ್ಲಿ ಭಾರತದಲ್ಲಿ ಐಫೋನ್ ಮಾರಾಟ ಶೇ.51ರಷ್ಟು ಹೆಚ್ಚಾಗಿದ್ದರೆ, ಆಪಲ್ ಉತ್ಪನ್ನಗಳ ಮಾರಾಟ ಕಳೆದ ವರ್ಷ ಪ್ರಥಮ ಬಾರಿಗೆ ಭಾರತದಲ್ಲಿ ಒಂದು ಬಿಲಿಯನ್ ಡಾಲರ್ ದಾಟಿದೆ. ಆದರೆ, ದೇಶದ ಒಟ್ಟು ಸ್ಮಾರ್ಟ್ ಫೋನ್ ಮಾರಾಟದಲ್ಲಿ ಆಪಲ್ ಪಾಲು ಶೇ. 2 ಕ್ಕಿಂತ ಕಡಿಮೆಯಾಗಿದೆ.

ಐಫೋನ್7 ಪ್ಲಸ್‌ನಲ್ಲಿ ಎರಡು ಕ್ಯಾಮರಾಗಳಿರುತ್ತವೆಯಾದರೂ ಬಾಹ್ಯ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿರದು. ಐಫೋನ್ 7 ಹಾಗೂ ಐಫೋನ್ 7 ಪ್ಲಸ್ ಹೆಚ್ಚು ಕಡಿಮೆ ಐಫೋನ್ 6ಎಸ್ ನಂತೆಯೇ ಕಾಣುವುದೆಂದು ಮೂಲವೊಂದು ತಿಳಿಸಿದೆ.

ಈ ವರ್ಷದ ದ್ವಿತೀಯಾರ್ಧದಲ್ಲಿ ಆಪಲ್ ಎರಡು ಹೊಸ ವಾಚ್‌ಗಳನ್ನೂ ಬಿಡುಗಡೆ ಮಾಡಲಿದ್ದು ಇವುಗಳು ಈಗಿರುವ ಆಪಲ್ ವಾಚ್ ಮಾದರಿಯ ಸುಧಾರಿತ ಅವತರಣಿಕೆಯಾಗಿದೆ. ಎರಡು ಹೊಸ ವಾಚ್‌ಗಳಲ್ಲಿ ಆಪಲ್ ವಾಚ್ 2, ಜಿಪಿಎಸ್, ಬ್ಯಾರೋಮೀಟರ್ ಹಾಗೂ ಇತರ ಹೊಸ ಫೀಚರ್‌ಗಳನ್ನು ಹೊಂದಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News