ಮಕ್ಕಾಗೆ ಸ್ವಾಗತಿಸುವ ಕುರ್ ಆನ್ ಮಹಾದ್ವಾರ
ಬಹುತೇಕರು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸೌದಿ ಅರೇಬಿಯಕ್ಕೆ ಉಮ್ರಾ, ಹಜ್ಜ್ ಗೆ ಅಥವಾ ಇತರ ಸ್ಥಳಗಳಿಗೆ ಭೇಟಿ ನೀಡಿರುತ್ತಾರೆ. ಜಿದ್ದಾ ವಿಮಾನ ನಿಲ್ದಾಣದಲ್ಲಿಳಿದು ಮಕ್ಕಾಗೆ ಹೋಗಬೇಕು. ಮಕ್ಕಾ ತಲುಪುವ ಮೊದಲು ಒಂದು ದೊಡ್ಡ ಕುರ್ ಆನ್ ಹೆಬ್ಬಾಗಿಲು ಸಿಗುತ್ತದೆ. ಈ ಜಾಗಕ್ಕೆ ಹೋಗದವರೂ ಈ ಸುಂದರ ಹೆಬ್ಬಾಗಿಲ ಬಗ್ಗೆ ತಿಳಿದುಕೊಳ್ಳಬೇಕು. ಸೌದಿ ಅರೇಬಿಯದಲ್ಲಿ ನೆಲೆಸಿರುವ ಬಹುತೇಕ ಎಲ್ಲಾ ಮುಸ್ಲಿಂ ನಿವಾಸಿಗಳು ಈ ಹೆಬ್ಬಾಗಿಲನ್ನು ನೋಡಿಯೇ ಇರುತ್ತಾರೆ.
1. ಇದನ್ನು ಕುರ್ ಆನ್ ಗೇಟ್‌ವೇ ಎನ್ನುತ್ತಾರೆ.
2. ಅದು ಜಿದ್ದಾ ಮಕ್ಕಾ ಹೆದ್ದಾರಿಯಲ್ಲಿದೆ. ಮಕ್ಕಾದ ಮಸ್ಜಿದುಲ್ ಹರಾಂನಿಂದ 27 ಕಿ.ಮೀ. ದೂರದಲ್ಲಿದೆ. ಮಕ್ಕಾಗೆ ಪಶ್ಚಿಮ ಬದಿಯಿಂದ ಭೇಟಿ ನೀಡುವವರು ಇದನ್ನು ನೋಡಿಯೇ ಇರುತ್ತಾರೆ.
3. ಈ ಗೇಟ್‌ವೇಯನ್ನು ಈಜಿಪ್ಟಿಯನ್ ವಾಸ್ತುಶಿಲ್ಪಿ ಸಮೀರ್ ಇಲಾಬಾದ್ 1979ರಲ್ಲಿ ನಿರ್ಮಿಸಿದ್ದಾರೆ.
4. ಈ ರಚನೆಯಲ್ಲಿ ದೊಡ್ಡ ತೆರೆದ ಕುರ್ ಆನ್ ಅನ್ನು ಸ್ಟ್ಯಾಂಡ್ ಮೇಲಿಡಲಾಗಿದೆ.
5. ಈ ರಚನೆ ಎಷ್ಟು ದೊಡ್ಡದಿದೆಯೆಂದರೆ ಅದು ಕೇಂದ್ರೀಯ ಹೆದ್ದಾರಿ ವಿಭಜಕ ಸೇರಿದಂತೆ ಎಂಟು ಪಥಗಳನ್ನು ಸುತ್ತುವರಿದಿದೆ.
6. ಸ್ಟ್ಯಾಂಡ್ ನ ಬದಿಗಳಲ್ಲಿ ಸುಂದರವಾದ ನೀಲಿ ಮತ್ತು ಹಸಿರು ಗಾಜಿನ ಕಿಟಕಿಗಳು ಗೋಡೆಗಳಿಗೆ ಜೋಡಿಕೊಂಡಿವೆ.
7. ಕೇವಲ ಮುಸ್ಲಿಮರಿಗೆ ಮಾತ್ರ ಮದೀನಾ ಮತ್ತು ಮಕ್ಕಾದ ಪವಿತ್ರ ನಗರಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ.
8. ಪ್ರವಾಸಿಗರ ಮಟ್ಟಿಗೂ ಇದು ಅತೀ ಪ್ರಮುಖ ರಚನೆಯಾಗಿದ್ದು, ಪವಿತ್ರ ನಗರವನ್ನು ಪ್ರವೇಶಿಸುವ ಮುಸ್ಲಿಮರಿಗೆ ತಂಪೆರೆಯುತ್ತದೆ.
ಕೃಪೆ: life-in-saudiarabia.blogspot.in