×
Ad

ಗಿಡ-ಮರಗಳನ್ನು ಬೆಳೆಸಿದರೆ ಪುಣ್ಯ ಪ್ರಾಪ್ತಿ: ಸಾಲುಮರದ ತಿಮ್ಮಕ್ಕ

Update: 2016-09-07 17:00 IST

ಮೂಡುಬಿದಿರೆ, ಸೆ.7: ಗಿಡ-ಮರಗಳನ್ನು ಬೆಳೆಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅವುಗಳನ್ನು ಮಕ್ಕಳಂತೆ ಆರೈಕೆ ಮಾಡಿದರೆ ಅದು ನಮ್ಮನ್ನು ಆರೈಸುತ್ತದೆ. ಹಿರಿಯರು ಕಿರಿಯರಲ್ಲಿ ಗಿಡ ನೆಡುವಂತೆ ಪ್ರೇರಣೆ ನೀಡಬೇಕು. ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

ಅವರು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಠಿ ನೇಚರ್ ಕ್ಲಬ್‌ನ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಸರಕಾರ ನನಗೆ ಮನೆ ಕಟ್ಟಿಕೊಡುತ್ತೇನೆ ಎಂದು ಹೇಳಿದ್ದು, ಅದರ ಬದಲಾಗಿ ಊರಿಗೆ ಆಸ್ಪತ್ರೆ ಕಟ್ಟಿಕೊಡುವಂತೆ ವಿನಂತಿಸಿದ್ದೆ. ಸರಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸ್ವಲ್ಪ ಸಮಯ ಆಸ್ಪತ್ರೆಗೆ ಬೇಕಾದ ಕೆಲಸಗಳು ನಡೆದಿವೆ. ಆದರೆ ಇಂದು ಅದು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಮ್ಮೂರು ಹಾನೆಗಲ್‌ಗೆ ಒಂದು ಸುಸಜ್ಜಿತ ಆಸ್ಪತ್ರೆ ಕೊಡಿ ಎಂದು ಸರಕಾರವನ್ನು ತಿಮ್ಮಕ್ಕ ಆಗ್ರಹಿಸಿದರು.

ಸಾಲು ಮರದ ತಿಮ್ಮಕ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಿಮ್ಮಕ್ಕ ಜನಪದ ಗೀತೆಗಳನ್ನು ಹಾಡಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಸೃಷ್ಠಿ ಕ್ಲಬ್‌ನ ಸಂಚಾಲಕ ಯುವರಾಜ್ ವೇದಿಕೆಯಲ್ಲಿದ್ದರು. ಕ್ಲಬ್‌ನ ಅಧ್ಯಕ್ಷೆ ಅನ್ವಿತಾ ಜೈನ್ ಸ್ವಾಗತಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಸಿದರು. ಸಾಲು ಮರದ ತಿಮ್ಮಕ್ಕನ ಸಾಧನೆಯ ಕುರಿತು ಪ್ರೊ.ಸತ್ಯಪ್ರಕಾಶ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News