ಪತ್ರಕರ್ತರ ಮೇಲಿನ ಹಲ್ಲೆಗೆ ಮುಸ್ಲಿಮ್ ಲೇಖಕರ ಸಂಘ ಖಂಡನೆ

Update: 2016-09-07 14:15 GMT

ಮಂಗಳೂರು, ಸೆ.7: ವಿವಾದವೊಂದರ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತರ ಮೇಲೆ ಸೂರಲ್ಪಾಡಿಯಲ್ಲಿ ಸ್ಥಳೀಯ ಯುವಕರು ನಡೆಸಿರುವ ಹಲ್ಲೆ ಪ್ರಕರಣವನ್ನು ಮುಸ್ಲಿಮ್ ಲೇಖಕರ ಸಂಘ ಖಂಡಿಸಿದೆ.

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಂತೆ ಮಾಧ್ಯಮರಂಗವೂ ಪ್ರಜಾಪ್ರಭುತ್ವದ ಪ್ರಮುಖ ಅಂಗ. ಪತ್ರಕರ್ತರನ್ನು ಗೌರವಿಸುವ ಬದಲು, ವರದಿಗಾರಿಕೆ ಬಂದವರೊಂದಿಗೆ ಅಸಭ್ಯವಾಗಿ ವರ್ತಿಸುವುದು ಮತ್ತು ಗೂಂಡಾಗಳಂತೆ ದೈಹಿಕ ಹಲ್ಲೆಗೆ ಮುಂದಾಗುವುದು ಉತ್ತಮ ಸಮುದಾಯದ ಲಕ್ಷಣವಲ್ಲ. ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪತ್ರಕರ್ತ ಬಾವ ಪದರಂಗಿಯವರು ನೀಡಿರುವ ಸಾಮಾಜಿಕ ಬಹಿಷ್ಕಾರದ ದೂರನ್ನು ಪರಿಶೀಲಿಸಿ ಅವರಿಗೆ ಕಾನೂನಿನ ನೆರವು ನೀಡಬೇಕು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News