ಮಾರಿಪಳ್ಳ: ಹೈಮಾಸ್ಟ್ ದೀಪ ಉದ್ಘಾಟನೆ

Update: 2016-09-07 15:28 GMT

ಬಂಟ್ವಾಳ, ಸೆ.7: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಜಕದಲ್ಲಿ 1.30 ಲಕ್ಷ ರೂ.ವೆಚ್ಚದಲ್ಲಿ ಅಳವಡಿಸಿದ ಹೈಮಾಸ್ಟ್ ದೀಪವನ್ನು ಬುಧವಾರ ಸಂಜೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಉಮರ್ ಫಾರೂಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಊರಿನ ನಾಗರಿಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಯಂತೆ ಸಲ್ಲಿಸಿದ್ದ ಮನವಿಗೆ ಕೂಡಲೇ ಸ್ಪಂದಿಸಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮಾರಿಪಳ್ಳ ಮತ್ತು ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಅನುದಾನ ಮಂಜೂರು ಮಾಡಿದ್ದರು. ಫರಂಗಿಪೇಟೆ ಗಣಪತಿ ವಿಸರ್ಜನೆ ಮೆರವಣಿಗೆ ಹಾಗೂ ಬಕ್ರೀದ್ ಹಬ್ಬಕ್ಕೆ ಮೊದಲು ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿ ಮುಗಿಸಿ ಉದ್ಘಾಟಿಸುವಂತೆ ಅಧಿಕಾರಿಗಳಿಗೆ ಸೂಚಿದ್ದರು ಎಂದು ತಿಳಿಸಿದ ಅವರು, ರಾಷ್ಟ್ರೀಯ ಹೆದ್ದಾರಿಯ ಮಾರಿಪಲ್ಲದ ಈ ಪ್ರದೇಶ ಅಪಘಾತ ವಲಯವಾಗಿದ್ದು ಹೈಮಾಸ್ಟ್ ದೀಪ ಅಳವಡಿಸುವ ಮೂಲಕ ರಾತ್ರಿ ಸಮಯದಲ್ಲಿ ಸಂಚಾರಿಸುವ ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೂ ಅನುಕೂಲಕರವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಮಾರಿಪಳ್ಳ ಬದ್ರಿಯಾ ಜುಮಾ ಮಸೀದಿಯ ಖತೀಬ್ ಸಿದ್ದೀಕ್ ಪೈಝಿ ದುಆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುದು ಗ್ರಾ.ಪಂ. ಅಧ್ಯಕ್ಷೆ ಆತಿಖಾ, ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯರಾದ ರಮ್ಲಾನ್, ಝಾಹೀರ್, ಅಬ್ದುಲ್ಲತೀಫ್, ಎಂ.ಕೆ.ಖಾದರ್, ಅಧ್ಯಕ್ಷ ಅಖ್ತರ್ ಹುಸೈನ್, ಮಾಜಿ ತಾಪಂ ಸದಸ್ಯ ಆಸಿಫ್ ಇಕ್ಬಾಲ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಹುಸೈನ್, ಜುಮಾ ಮಸೀದಿ ಉಪಾಧ್ಯಕ್ಷ ಖಾಜಾ ಬಾವಾಕ, ಜಬ್ಬಾರ್ ಮಾರಿಪಳ್ಳ, ಎಂ.ಕೆ.ಮುಹಮ್ಮದ್, ಕರೀಂ ಕಣ್ಣೂರು, ಇಸ್ಮಾಯೀಲ್ ಕೆ.ಇ.ಎಲ್., ಇಕ್ಬಾಲ್ ಸುಜೀರ್, ಕಿಶೋರ್ ಸುಜೀರ್, ಸದಾಶಿವ ಕುಮ್ಡೇಲ್, ರಫೀಕ್ ಪೇರಿಮಾರ್, ಅಬೂಬಕ್ಕರ್ ಹಬ್ಬು, ಶೌಕತ್ ಅಲಿ, ಹಕೀಂ ಉರ್ವ, ಲತೀಫ್ ಮಲಾರ್, ಇಬ್ರಾಹೀಂ ಕುಂಪನಮಜಲು, ಸಲಾಂ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News