ಮಂಜೇಶ್ವರ: ಇಮಾಂ ಶಾಫಿ ಅಕಾಡೆಮಿಯಲ್ಲಿ ಮಾಧ್ಯಮ ಸೆಮಿನಾರ್

Update: 2016-09-07 16:04 GMT

ಮಂಜೇಶ್ವರ, ಸೆ.7: ನಾಯಿಗಳು ಬೀದಿಯನ್ನು ಆಳುತ್ತಿರುವಾಗ ಮನುಷ್ಯ ಮೃತದೇಹವನ್ನು ಹೊತ್ತುಕೊಂಡು ಹೋಗುವ ದೃಶ್ಯ ಮನಕಲಕುವಂತದ್ದು. ಮನುಷ್ಯ ಜೀವಗಳಿಗೆ ಬೆಲೆ ಕಲ್ಪಿಸುವ ರೀತಿಯಲ್ಲಿ ಆಡಳಿತ ವರ್ಗ ಕಾರ್ಯಾಚರಿಸಬೇಕೆಂದು ಕುಂಬಳೆ ಇಮಾಂ ಶಾಫಿ ಅಕಾಡೆಮಿಯಲ್ಲಿ ಆಯೋಜಿಸಿದ್ದ ಮಾಧ್ಯಮ ಸೆಮಿನಾರ್ ಆಗ್ರಹಿಸಿದೆ.

ವಿದ್ಯಾರ್ಥಿಗಳು ಸಹಿತ ಯುವ ಪೀಳಿಗೆ ಮಾದಕ ವ್ಯಸನಗಳಿಗೆ ಮಾರು ಹೋಗುತ್ತಿರುವುದು ಅಪಯಕಾರಿ ಎಂದು ಕಳವಳ ವ್ಯಕ್ತಪಡಿಸಿದ ಸೆಮಿನಾರ್ ಇದರ ನಿಯಂತ್ರಣಕ್ಕೆ ಸಂಬಂಧಪಟ್ಟವರು ಮುಂದಾಗಬೇಕೆಂದು ಆಗ್ರಹಿಸಿದೆ. ಮಾಧ್ಯಮಗಳು ತಮ್ಮ ಕರ್ತವ್ಯದ ಬಗ್ಗೆ ಕಾಳಜಿ ವಹಿಸಿರುವುದರಿಂದಲೇ ಕೇರಳದಂತಹ ರಾಜ್ಯಗಳಲ್ಲಿ ಅರಾಜಕತ್ವ ನಡೆಯುತ್ತಿಲ್ಲ ಎಂದು ಸೆಮಿನಾರ್ ಆಭಿಪ್ರಾಯಪಟ್ಟಿತು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಕಾಸರಗೋಡು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಟಿ.ಎ. ಶಾಫಿ ಮೋಡರೇಟರ್ ಆದ ಸಂವಾದದಲ್ಲಿ ಪತ್ರಕರ್ತರಾದ ಶೆಫೀಕ್ ನಸ್ರುಲ್ಲಾ , ಆರಿಫ್ ಮಚ್ಚಂಪಾಡಿ, ಸಲಾಂ ವರ್ಕಾಡಿ, ಸೀದಿಕುಞಿ ಕುಂಬಳೆ ಮಾತನಾಡಿದರು. ಇಮಾಂ ಶಾಫಿ ಅಕಾಡೆಮಿಯ ಅಧ್ಯಾಪಕರಾದ ಮೂಸಾ ನಿಝಾಮಿ ನಾಟೆಕ್ಕಲ್, ಅಬ್ದುರ್ರಹ್ಮಾನ್ ಹೈತಮಿ , ಅಬ್ದುಸ್ಸಲಾಂ ವಾಫಿ, ಹಂಝ ಮುಸ್ಲಿಯಾರ್, ಸಫ್ವಾನ್ ವಾಫಿ, ಶಮೀರ್ ವಾಫಿ, ಫಾರೂಕ್ ಅಝ್‌ಹರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News