×
Ad

ಮುಡಿಪು ಚರ್ಚ್‌ನಲ್ಲಿ ತೆನೆಹಬ್ಬದ ಸಂಭ್ರಮ

Update: 2016-09-08 12:17 IST

ಕೊಣಾಜೆ, ಸೆ.8: ಮುಡಿಪುವಿನ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ಚರ್ಚ್‌ನಲ್ಲಿ ಕನ್ಯಾ ಮರಿಯಮ್ಮನವರ ಜನ್ಮ ದಿನಾಚರಣೆ (ತೆನೆ ಹಬ್ಬ)ಯು ಗುರುವಾರ ಬೆಳಗ್ಗೆ ಸಂಭ್ರಮದಿಂದ ನಡೆಯಿತು.

ಸಂತ ಜೋಸೆಫ್ ವಾಜ್ ಚರ್ಚ್‌ನ ವಂ. ಧರ್ಮಗುರು ಬೆಂಜಮಿನ್ ಪಿಂಟೊ ಅವರು ಭತ್ತದ ತೆನೆಯನ್ನು ಆಶೀರ್ವದಿಸುವುದರ ಮೂಲಕ ಪೂಜೆ ಸಲ್ಲಿಸಿದರು. ಯೇಸುಸಭೆಯ ವಂ.ಗುರು ಜೋಯ್ ಕೃತಜ್ಞತಾ ಪೂಜೆಯನ್ನು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತರು ತೆನೆ ಹಬ್ಬದಲ್ಲಿ ಪಾಲ್ಗೊಂಡರು.
ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ವಾರ್ಷಿಕ ಉತ್ಸವವು ಡಿ. 1ರಿಂದ 3ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News