ಕರ್ನಾಟಕ ಬಂದ್ ಬೆಂಬಲಿಸದಿರಲು ತುಳುನಾಡು ಒಕ್ಕೂಟ ಕರೆ
Update: 2016-09-08 16:18 IST
ಬೆಳ್ತಂಗಡಿ, ಸೆ.8: ಕಾವೇರಿ ವಿಚಾರದಲ್ಲಿ ಶುಕ್ರವಾರ ನಡೆಯಲಿರುವ ರಾಜ್ಯ ಬಂದ್ ಬೆಂಬಲಿಸದಿರುವಂತೆ ತುಳುನಾಡು ಒಕ್ಕೂಟದ ಬೆಳ್ತಂಗಡಿ ನಗರ ಸಮಿತಿಯ ಅಧ್ಯಕ್ಷ ಜನಾರ್ದನ ಬಂಗೇರ ಒತ್ತಾಯಿಸಿದ್ದಾರೆ
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರಾವತಿ ನದಿ ತಿರುವಿನಂತಹ ಯೋಜನೆಯ ವಿರುದ್ಧ ಇಡೀ ತುಳುನಾಡು ಧ್ವನಿಯೆತ್ತಿದರೂ ಸರಕಾರ ಇದಕ್ಕೆ ಸ್ಪಂದಿಸುವ ಕಾರ್ಯ ಮಾಡಿಲ್ಲ. ಈ ಹಿನ್ನ್ನೆಲೆಯಲ್ಲಿ ಕಾವೇರಿಗಾಗಿನ ಬಂದ್‌ನಲ್ಲಿ ಭಾಗವಹಿಸದಿರುವಂತ ಅವರು ಜನರನ್ನು ವಿನಂತಿಸಿದ್ದಾರೆ
ಬೆಳ್ತಂಗಡಿಯಲ್ಲಿ ಬಂದ್‌ಗೆ ಯಾವುದೇ ಬೆಂಬಲ ನೀಡುವುದಿಲ್ಲ. ಬಂದ್ ಬೆಂಬಲಿಸದಂತೆ ನಗರದ ಹಾಗೂ ಜಿಲ್ಲೆಯ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು ತುಳುನಾಡು ಒಕ್ಕೂಟ ಮಾಡಲಿದೆ ಎಂದು ಅವರು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ವಸಂತ್ ಮೊದಲಾದವರು ಉಪಸ್ಥಿತರಿದ್ದರು.