×
Ad

ಸೆ.10: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್‌ವಿಂಗ್‌ನಿಂದ ಸ್ಕಾಲರ್‌ಶಿಪ್ ಮಾಹಿತಿ ಶಿಬಿರ

Update: 2016-09-08 17:30 IST

ಮಂಗಳೂರು, ಸೆ.8: ಎಸ್ಕೆಎಸ್ಸೆಸ್ಸೆಪ್ ಕ್ಯಾಂಪಸ್‌ವಿಂಗ್ ಕೈಕಂಬ ವಲಯದ ವತಿಯಿಂದ ಕ್ಯಾಂಪಸ್ ಮೀಟ್ ಕಾರ್ಯಕ್ರಮ ಮತ್ತು ಸ್ಕಾಲರ್‌ಶಿಪ್ ಮಾಹಿತಿ ಶಿಬಿರ ಸೆ. 10ರಂದು ಅಪರಾಹ್ನ 2 ಗಂಟೆಗೆ ಕೈಕಂಬ ಜಂಕ್ಷನ್ ಸಮೀಪದ ಎಸ್ಕೆಎಸ್ಸೆಸ್ಸೆಪ್ ಕೈಕಂಬ ವಲಯ ಕಚೇರಿಯಲ್ಲಿ ನಡೆಯಲಿದೆ.

ಸ್ಕಾಲರ್‌ಶಿಪ್ ಮಾಹಿತಿ ಶಿಬಿರದಲ್ಲಿ ಸ್ಕಾಲರ್‌ಶಿಪ್ ಫಾರ್ಮ್ ವಿತರಣೆ, ಪ್ರಿ-ಮೆಟ್ರಿಕ್, ಪೋಸ್ಟ್-ಮೆಟ್ರಿಕ್, ಮೆರಿಟ್ ಕಂ ಮೀನ್ಸ್ ಆನ್‌ಲೈನ್ ನೋಂದಾವಣೆಯ ಮಾಹಿತಿ ಮತ್ತು ಉಚಿತ ನಕಲಿಪ್ರತಿ ವಿತರಣೆ ಮಾಡಲಾಗುವುದು ಎಂದು ಎಸ್ಕೆಎಸ್ಸೆಸ್ಸೆಪ್ ಕ್ಯಾಂಪಸ್ ವಿಂಗ್ ಕೈಕಂಬ ವಲಯ ಕೋ- ಆರ್ಡಿನೇಟರ್ ಅಬ್ದುಸಲಾಂ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News