×
Ad

ದೇವಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ಕೇರಳದಲ್ಲಿ ನಿಷೇಧ

Update: 2016-09-08 19:10 IST

ತಿರುವನಂತಪುರ, ಸೆ.8: ರಾಜ್ಯದಲ್ಲಿ ಕಾರ್ಯಚರಿಸುತ್ತಿರುವ ಆರೆಸ್ಸೆಸ್ ಶಾಖೆಗಳ ವಿರುದ್ಧ ಕ್ರಮವಾಗಿ, ಕೇರಳ ಸರಕಾರವು ದೇವಾಲಯಗಳ ಆವರಣದಲ್ಲಿ ದೈಹಿಕ ತರಬೇತಿ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಆರಂಭಿಸಿದೆ.

ಕೇರಳ ಪೊಲೀಸ್ ಕಾಯ್ದೆಯ ಸೆ.73ರನ್ವಯ, ದೇವಸ್ಥಾನಗಳಲ್ಲಿ ಅಂತಹ ಚಟುವಟಿಕೆಗಳನ್ನು ಸರಕಾರ ನಿಷೇಧಿಸಬಹುದು ಎಂದು ಕಾನೂನು ಇಲಾಖೆ ಶಿಫಾರಸು ಮಾಡಿದೆ. ಈ ಕುರಿತಾದ ಸರಕಾರಿ ಆದೇಶವು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಅನುಮೋದನೆಗಾಗಿ ಕಾಯುತ್ತಿದೆ.

ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ರ ಪ್ರಸ್ತಾವಕ್ಕೆ ಉತ್ತರವಾಗಿ ಕಾನೂನು ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು.

ತರಬೇತಿ, ವ್ಯಾಯಾಮ ಅಥವಾ ಸ್ವರಕ್ಷಣೆ ತರಬೇತಿ ಸಹಿತ ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸಲು ಕೇರಳ ಪೊಲೀಸ್ ಕಾಯ್ದೆಯ ಸೆ.73ರನ್ವಯ ಅವಕಾಶವಿಲ್ಲವೆಂದು ಕಾನೂನು ಕಾರ್ಯದರ್ಶಿ ಬಿ.ಜಿ.ಹರೀಂದ್ರನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News