ರಾಹುಲ್ ಒಳ್ಳೆಯ ವ್ಯಕ್ತಿ ಸ್ನೇಹಕ್ಕೆ ಅರ್ಹ: ಅಖಿಲೇಶ್
ಲಕ್ನೊ, ಸೆ.8: ಉತ್ತರ ಪ್ರದೇಶದಲ್ಲಿ 2,500 ಕಿ.ಮೀ. ಕಿಸಾನ್ ಮಹಾಯಾತ್ರೆಯನ್ನು ನಡೆಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ‘ಒಳ್ಳೆಯ ಮನುಷ್ಯ’ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ವ್ಯಾಖ್ಯಾನಿಸಿದ್ದಾರೆ. ಅವರು ರಾಜ್ಯದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರಾದರೆ ತಾವು ‘ಮೈತ್ರಿಯೊಂದನ್ನು’ ಮಾಡಿಕೊಳ್ಳಬಹುದೆಂದು ಅಖಿಲೇಶ್ ಹೇಳಿದ್ದಾರೆ. ಇದು ರಾಜಕೀಯ ಮರುಸಮೀಕರಣದ ಕುರಿತು ಊಹಾಪೋಹಕ್ಕೆ ಚಾಲನೆ ನೀಡಿದೆ.
ಆದಾಗ್ಯೂ, ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗು ಎಸ್ಪಿಗಳ ನಡುವೆ ಸಂಭಾವ್ಯ ಮೈತ್ರಿಯ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸದೆ ಅವರು ನುಣುಚಿಕೊಂಡಿದ್ದಾರೆ.
ರಾಹುಲ್‌ಜಿ ಭಾರೀ ಒಳ್ಳೆಯ ವ್ಯಕ್ತಿಯಾಗಿದ್ದಾರೆ. ಒಳ್ಳೆಯ ಹುಡುಗನಾಗಿದ್ದಾರೆ. ಅವರು ಉತ್ತರಪ್ರದೇಶದಲ್ಲಿ ಹೆಚ್ಚು ಸಮಯ ನಿಲ್ಲುತ್ತಾರಾದಲ್ಲಿ ತಮ್ಮಾಳಗೂ ಸ್ನೇಹ ಬೆಳೆಯಬಹುದು. ಇಬ್ಬರು ಒಳ್ಳೆಯ ಮನುಷ್ಯರು ಒಂದಾಗುತ್ತಾರಾದರೆ ಅದರಲ್ಲಿ ಕೆಟ್ಟದೇನಿದೆ? ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.