×
Ad

ಮುಸ್ಲಿಂ ಹೊಟೇಲ್‌ಗಳ ಬಿರಿಯಾನಿ ‘ರುಚಿ ನೋಡಿದ’ ಹರ್ಯಾಣ ಸರಕಾರ

Update: 2016-09-08 22:42 IST

ಚಂಡಿಗಡ, ಸೆ.8: ಹರ್ಯಾಣ ಸರಕಾರ ರಾಜ್ಯದ ಹೊಟೇಲ್‌ಗಳ ಬಿರಿಯಾನಿ ಮೇಲೆ ಕಣ್ಣುಹಾಕಿದೆ. ರಾಜ್ಯದ ಮೇವಾಟ್ ಜಿಲ್ಲೆಯ ಮುಸ್ಲಿಂ ಬಾಹುಳ್ಯದ ಗ್ರಾಮದಲ್ಲಿ ಹಲವು ಬಿರಿಯಾನಿ ಹೊಟೇಲ್‌ಗಳಿಂದ ಅಧಿಕಾರಿಗಳು ಬಿರಿಯಾನಿ ಸ್ಯಾಂಪಲ್ ಸಂಗ್ರಹಿಸಿದ್ದು, ಇದಕ್ಕೆ ಗೋಮಾಂಸ ಸೇರಿಸಲಾಗಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರು ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಕಳೆದ ವಾರ ಬಿರಿಯಾನಿ ಮಾದರಿಯನ್ನು ಸಂಗ್ರಹಿಸಿದ್ದು, ಹರ್ಯಾಣ ಕೃಷಿ ವಿಶ್ವವಿದ್ಯಾನಿಲಯದ ಹಿಸ್ಸಾರ್ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಪ್ರದೇಶದಲ್ಲಿ ಗೋಮಾಂಸ ಸೇವಿಸಲಾಗುತ್ತದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮುಂದಿನ ವಾರ ಮುಸ್ಲಿಮರು ಬಕ್ರೀದ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಸ್ಯಾಂಪಲ್ ಸಂಗ್ರಹಿಸಿ, ಪೊಲೀಸರಿಗೆ ನೀಡಲಾಗಿದೆ ಎಂದು ಮೆವಾಟ್ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ನರೇಂದ್ರ ಕುಮಾರ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಗೋಮಾಂಸ ಬಳಕೆ ಅಧಿಕವಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಗೋಸಂರಕ್ಷಣಾ ಕಾರ್ಯಪಡೆ, ಹದ್ದಿನ ಕಣ್ಣು ಇಟ್ಟಿದೆ.

ಆ.4ರ ತೀರ್ಪು ದಿಲ್ಲಿ ಸರಕಾರದ ವಿರುದ್ಧ ವಿದೆಯೆಂಬುದನ್ನು ಇಂದು ತಾನು ಒಪ್ಪಿ ಕೊಂಡಿದ್ದೇನೆಂದು ಅವರು ಹೇಳಿದರು.
ದಿಲ್ಲಿ ಸರಕಾರದ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ದಿಲ್ಲಿ ಸರಕಾರದ ಆದೇಶವನ್ನು ರದ್ದುಪಡಿಸಲಾಗಿದೆಯೆಂದು ತೀರ್ಪು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News