ನರೇಂದ್ರ ಮೋದಿ ಆರ್ಮಿ ಬ್ರಿಗೇಡ್ ಸ್ಥಾಪಕನಿಂದ ಸೆಕ್ಸ್ ಜಾಲ, ಬಂಧನ
ಭೋಪಾಲ್, ಸೆ.8: ಗ್ವಾಲಿಯರ್‌ನಲ್ಲಿ ಸೆಕ್ಸ್ ಜಾಲ ನಡೆಸುತ್ತಿದ್ದ ಆರೋಪದಲ್ಲಿ ನರೇಂದ್ರ ಮೋದಿ ಆರ್ಮಿ ಬ್ರಿಗೆಡ್ ಸಂಸ್ಥಾಪಕ ಟಿನು ಜೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಣಕ ವ್ಯಕ್ತವಾಗಿದ್ದು, ಟ್ವಿಟರ್ ಬಳಕೆದಾರರು, ನಮೋ ಸೆಕ್ಸಿ ಆರ್ಮಿ ಎಂದು ಲೇವಡಿ ಮಾಡಿದ್ದಾರೆ.
ಗ್ವಾಲಿಯರ್‌ನ ಡಿಬಿ ಸಿಟಿ ಟೌನ್‌ಶಿಪ್ ಪ್ರದೇಶದಲ್ಲಿ ಜೈನ್ ನಡೆಸುತ್ತಿದ್ದ ಸ್ಪಾಮೇಲೆ ಪೊಲೀಸರು ದಾಳಿ ಮಾಡಿದಾಗ, ಜೈನ್ ಸ್ವತಃ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.
ದಿಲ್ಲಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ, ಬಿಜೆಪಿ ಬೆಂಬಲಿಗರು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಲಘುವಾಗಿ ಮಾತನಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಜೈನ್ ಅವರ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರ ಜೊತೆ ಇರುವ ಫೋಟೊಗಳು ರಾರಾಜಿಸುತ್ತಿವೆ. ಇವರಿಗೆ 10 ಸಾವಿರ ಅನುಯಾಯಿಗಳಿದ್ದಾರೆ. ಅವರ ಕೊನೆಯ ಫೇಸ್‌ಬುಕ್ ಪೋಸ್ಟ್ ಹಿಂದಿಯಲ್ಲಿದ್ದು, ಯಾವ ರೀತಿಯಲ್ಲಾದರೂ ನಾನು ನಿಮ್ಮ ಮುಂದೆ ನಿಲ್ಲುತ್ತೇನೆ. ನಾನು ಏನನ್ನೂ ಮುಚ್ಚಿಡುವ ವ್ಯವಹಾರದಲ್ಲಿಲ್ಲ ಎಂದಾಗಿತ್ತು. ಆದರೆ ಈಗ ಬೆಳಕಿಗೆ ಬಂದಿರುವ ಘಟನೆಯಿಂದ ಮೋದಿಯವರ ಕಟ್ಟಾ ಬೆಂಬಲಿಗ ಕದ್ದು ಮುಚ್ಚಿ ವ್ಯವಹಾರ ನಡೆಸುತ್ತಿದ್ದುದು ಬಹಿರಂಗವಾಗಿದೆ.