ಆಪ್ ಸರಕಾರದ ಆದೇಶ ದಿಲ್ಲಿ ಹೈಕೋರ್ಟ್‌ನಿಂದ ರದ್ದು
Update: 2016-09-08 22:57 IST
ಹೊಸದಿಲ್ಲಿ, ಸೆ.8: ಸಂಸದೀಯ ಕಾರ್ಯ ದರ್ಶಿಗಳಾಗಿ 21 ಮಂದಿ ಆಪ್ ಶಾಸಕರನ್ನು ನೇಮಿಸಿದ್ದ ಅರವಿಂದ ಕೇಜ್ರಿವಾಲ್ ಸರಕಾರದ ಆದೇಶವನ್ನು ದಿಲ್ಲಿ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
2015ರ ಮಾರ್ಚ್ 13ರ ಈ ಆದೇಶವನ್ನು ಲೆಫ್ಟಿನೆಂಟ್ ಗರ್ವನರ್‌ರ ಅನುಮತಿ ಹಾಗೂ ಅಭಿಪ್ರಾಯವನ್ನು ಪಡೆಯದೆ ನೀಡಲಾಗಿತ್ತೆಂದು ದಿಲ್ಲಿ ಸರಕಾರದ ಪರ ವಕೀಲರು ‘ಒಪ್ಪಿಕೊಂಡ’ ಬಳಿಕ ನ್ಯಾಯಮೂರ್ತಿಗಳಾದ ಜಿ.ರೋಹಿಣಿ ಹಾಗೂ ಸಂಗೀತಾ ಧಿಂಗ್ರಾ ಸೆಹಗಲ್‌ರನ್ನೊಳಗೊಂಡ ಪೀಠವೊಂದು ಈ ತೀರ್ಪು ನೀಡಿದೆ.
ಲೆಫ್ಟಿನೆಂಟ್ ಗವರ್ನರ್‌ರ ಅನುಮತಿಯಿಲ್ಲದೆ ಆಪ್ ಸರಕಾರ ಹೊರಡಿಸಿದ್ದ ಹಲವು ಅಧಿಸೂಚನೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್‌ನ ಆ.4ರ ತೀರ್ಪನ್ನು ದಿಲ್ಲಿ ಸರಕಾರದ ಪರ ವಕೀಲ ಸುಧೀರ್ ನಂದ್ರಾಜೋಗ್ ಉಲ್ಲೇಖಿಸಿದರು.