ಎಂಟಿಎಸ್‌ಎಸ್ ಅಧ್ಯಕ್ಷರಾಗಿ ಹರ್ಷದ್ ಒಕ್ಕೆತ್ತೂರು ಆಯ್ಕೆ
ವಿಟ್ಲ, ಸೆ.10: ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿ ಅಧೀನಕ್ಕೊಳಪಟ್ಟ ಮಂಬವುಲ್ ಉಲೂಂ ದರ್ಸ್ ವಿದ್ಯಾರ್ಥಿಗಳ ಸಂಘಟನೆ ಮಿಫ್ತಾಹುತ್ತುಲಬಾ ಸಾಹಿತ್ಯ ಸಮಾಜದ ನೂತನ ಅಧ್ಯಕ್ಷರಾಗಿ ವಿ.ಎಂ.ಮುಹಮ್ಮದ್ ಹರ್ಷದ್ ಒಕ್ಕೆತ್ತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀವುಲ್ಲಾ ಮಾರಿಪಳ್ಳ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ದರ್ಸ್ ಸಭಾಂಗಣದಲ್ಲಿ ನಡೆದ ಸಂಘನೆಯ 9ನೆ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಮಸೀದಿ ಮುದರ್ರಿಸ್ ಹಾಜಿ ಕೆ.ಐ.ಅಶ್ರಫ್ ಸಖಾಫಿ ಅಲ್-ಕಾಮಿಲ್ ಸವಣೂರು ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ಲಾ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ರಫೀಕ್ ಹಿಮಾಮಿ ಪ್ರಸ್ತಾವನೆಗೈದರು. ವಿದ್ಯಾರ್ಥಿ ಹಾಶಿರ್ ಕಿರಾಅತ್ ಪಠಿಸಿದರು. ಸಾಬಿತ್ ಸ್ವಾಗತಿಸಿ, ವಂದಿಸಿದರು. ಗೌರವಾಧ್ಯಕ್ಷರಾಗಿ ಹಾಜಿ ಕೆ.ಐ.ಅಶ್ರಫ್ ಸಖಾಫಿ ಅಲ್-ಕಾಮಿಲ್ ಸವಣೂರು, ಉಪಾಧ್ಯಕ್ಷರಾಗಿ ಹುಸೈನ್ ಪಳ್ಳಿತ್ತಾರ್, ಜೊತೆ ಕಾರ್ಯದರ್ಶಿಯಾಗಿ ಸಿನಾನ್ ಬಂಟ್ವಾಳ, ಕೋಶಾಧಿಕಾರಿಯಾಗಿ ವಿ.ಎಂ.ಮುಹಮ್ಮದ್ ಜಾಬಿರ್ ಒಕ್ಕೆತ್ತೂರು, ಸಲಹೆಗಾರರಾಗಿ ಅಬ್ದುಲ್ಲಾ ಸಖಾಫಿ ಬೆಳಂದೂರು, ಇಸ್ಮಾಯೀಲ್ ಮುಸ್ಲಿಯಾರ್ ಉಪ್ಪಿನಂಗಡಿ, ರಫೀಕ್ ಹಿಮಾಮಿ ಬೆಳ್ತಂಗಡಿ, ಕೈಬರಹ ಮಾಸಿಕದ ಸಂಪಾದಕರಾಗಿ ಸಾಬಿತ್ ಕುಕ್ಕಾಜೆಯವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅನಸ್ ಸರಳಿಕಟ್ಟೆ, ಜಲೀಲ್ ಮೂರುಗೋಳಿ, ಹಾಶಿರ್ ಕಡಬ, ಹಾಶಿರ್ ಗೋಳಿಪಡ್ಪು, ರುಮೈಝ್ ಮಾರಿಪಳ್ಳ, ತುಫೈಲ್ ಉಜಿರೆ, ಹಫೀಝ್ ಶಿವಮೊಗ್ಗ, ಶಾಹುಲ್ ಶಿವಮೊಗ್ಗ, ಅಸ್ಗರ್ ಅಲಿ ಸವಣೂರು ಅವರನ್ನು ನೇಮಿಸಲಾಯಿತು.