ಆಲಂಕಾರು: ಅಡಿಕೆ ಅಂಗಡಿಗೆ ನುಗ್ಗಿದ ಕಳ್ಳರು
Update: 2016-09-10 16:45 IST
ಕಡಬ, ಸೆ.10. ಠಾಣಾ ವ್ಯಾಪ್ತಿಯ ಆಲಂಕಾರು ಪೇಟೆಯಲ್ಲಿನ ಅಬ್ದುಲ್ ಕುಂಞಿ ಎಂಬವರಿಗೆ ಸೇರಿದ ಅಡಿಕೆ ಅಂಗಡಿಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು 25 ಗೋಣಿ ಅಡಿಕೆಗಳನ್ನು ಕದ್ದೊಯ್ದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಅಂಗಡಿಯಲ್ಲಿ ಅಡಿಕೆ ದಸ್ತಾನು ಇರುವ ಬಗ್ಗೆ ಮಾಹಿತಿ ತಿಳಿದವರೇ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹಾಗೂ ಸಿಬ್ಬಂದಿ, ಶ್ವಾನ ದಳ, ಬೆರಳಚ್ಚು ತಜ್ಞರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.