×
Ad

ಕುತ್ಪಾಡಿ ಎಸ್‌ಡಿಎಂನಲ್ಲಿ ಗುರುವಂದನಾ ಕಾರ್ಯಕ್ರಮ

Update: 2016-09-10 16:58 IST

ಉಡುಪಿ, ಸೆ.10: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲೆ ಡಾ. ಸುನಂದಾ ಎಂ.ಪೈ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಡಾ.ಕೆ.ಆರ್.ರಾಮಚಂದ್ರ ವಹಿಸಿದ್ದರು. ಆಸ್ಪತ್ರೆಯ ವೈದ್ಯ ಕೀಯ ಮುಖ್ಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಮಾತನಾಡಿದರು.

ಪ್ರಾಂಶುಪಾಲ ಡಾ.ಶ್ರೀಕಾಂತ್ ಯು., ಕಾಯಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀಲತಾ ಕಾಮತ್, ಆಸ್ಪತ್ರೆಯ ವ್ಯವಸ್ಥಾಪಕ ಶ್ರೀನಿವಾಸ ಹೆಗ್ಡೆ, ಹಳೆವಿದ್ಯಾರ್ಥಿಗಳಾದ ಡಾ.ಶ್ರೀಪತಿ ಕಿನ್ನಿಕಂಬಳ, ಡಾ.ಎನ್.ಟಿ. ಅಂಚನ್ ಉಪಸ್ಥಿತರಿದ್ದರು. ಕಾಯಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ಡಾ. ವೀರಕುಮಾರ ಕೆ. ಸನ್ಮಾನ ಪತ್ರದ ವಾಚಿಸಿದರು.

ರಸಶಾಸ್ತ್ರ ಮತ್ತು ಬೈಷಜ್ಯ ಕಲ್ಪನ ವಿಭಾಗದ ಮುಖ್ಯಸ್ಥ ಡಾ.ಪ್ರಭಾಕರ ಯು.ರೆಂಜಾಳ್ ಸ್ವಾಗತಿಸಿದರು. ಸಂಹಿತಾ ಸಿದ್ಧಾಂತ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಕಾಂತ್ ಪಿ.ಎಚ್ ವಂದಿಸಿದರು. ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕ ಡಾ.ಯೋಗೀಶ್ ಆಚಾರ್ಯ ಹಾಗೂ ಶರೀರ ರಚನಾ ವಿಭಾಗದ ಉಪನ್ಯಾ ಸಕಿ ಡಾ.ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News