ಉಪ್ಪಿನಂಗಡಿ: ಅಂತರ್‌ಕಾಲೇಜು ನೃತ್ಯ ಮತ್ತು ಗಾಯನ ಸ್ಪರ್ಧೆ
ಉಪ್ಪಿನಂಗಡಿ, ಸೆ.10: ಜೇಸಿಐ ಸಪ್ತಾಹದಂಗವಾಗಿ ಉಪ್ಪಿನಂಗಡಿಯ ಶ್ರೀ ಗುರುಸುಧೀಂದ್ರ ಕಲಾ ಮಂದಿರದಲ್ಲಿ ಸೆ.10ರಂದು ಅಂತರ್ ಕಾಲೇಜು ನೃತ್ಯ ಮತ್ತು ಗಾಯನ ಸ್ಪರ್ಧೆ ‘ಸಾಂಸ್ಕೃತಿಕ ಸಿಂಚನ’ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಅಧ್ಯಕ್ಷ ಐತಪ್ಪನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಪತ್ರಕರ್ತ ಯು.ಎಲ್. ಉದಯಕುಮಾರ್, ಜೆಸಿಐ ಭಾರತದ ರಾಷ್ಟ್ರೀಯ ಅಧಿಕಾರಿ ಪಿ.ಪಿ.ಪಿ. ಚಂದ್ರಶೇಖರ್ ನಾಯರ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಪ್ರಭಾತ್ ಭಟ್, ಜೆಸಿಐ ವಲಯ 15ರ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ರೈ, ಜೂನಿಯರ್ ಜೆಸಿಐ ಅಧ್ಯಕ್ಷ ಪ್ರಶಾಂತ್, ಜೆಸಿಐ ಕಾರ್ಯದರ್ಶಿ ಶಶಿಧರ ನೆಕ್ಕಿಲಾಡಿ, ನಿಕಟಪೂರ್ವಾಧ್ಯಕ್ಷ ಜಯಾನಂದ ಕಲ್ಲಾಪು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹರೀಶ್ ನಾಯಕ್ ನಟ್ಟಿಬೈಲ್, ವಿಜಯಕುಮಾರ್ ಕಲ್ಲಳಿಕೆ, ಕಂಗ್ವೆ ವಿಶ್ವನಾಥ್, ಅನೂಪ್ ಸಿಂಗ್, ನೀರಜ್ ಕುಮಾರ್, ನಯನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜೆಸಿಐ ಉಪ್ಪಿನಂಗಡಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಪ್ತಾಹ ನಿರ್ದೇಶಕ ಉಮೇಶ್ ವಂದಿಸಿದರು.