ಬೈಕ್‌ಗೆ ಕಂಟೈನರ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಪುತ್ತೂರು, ಸೆ.10: ಬೈಕ್ ಮತ್ತು ಕಂಟೈನರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅಮ್ಚಿನಡ್ಕ ಎಂಬಲ್ಲಿ ಶನಿವಾರ ನಡೆದಿದೆ.
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕೊಂರ್ಬಡ್ಕ ನಿವಾಸಿ ಬಾಬು ರಾಜೇಂದ್ರ ಗೌಡ ಎಂಬವರ ಪುತ್ರ ಶ್ರೀಕೃಷ್ಣಪ್ರಸಾದ್ (45) ಮೃತ ಬೈಕ್ ಸವಾರ.
ಶ್ರೀಕೃಷ್ಣಪ್ರಸಾದ್ ಅವರು ತನ್ನ ಪತ್ನಿಯನ್ನು ಸುಳ್ಯಕ್ಕೆ ಬಿಟ್ಟು ಮನೆಗೆ ವಾಪಸ್ಸಾಗುವ ವೇಳೆ ಅಮ್ಚಿನಡ್ಕದಲ್ಲಿ ಈ ಅಪಘಾತ ನಡೆದಿದೆ. ಶ್ರೀಕೃಷ್ಣಪ್ರಸಾದ್ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಬರುತ್ತಿದ್ದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮೃತರು ಪ್ರಗತಿಪರ ಕೃಷಿಕರಾಗಿದ್ದರು. ಇವರ ಪತ್ನಿ ಸುಳ್ಯದಲ್ಲಿ ಬ್ಯೂಟಿ ಪಾರ್ಲರನ್ನು ನಡೆಸುತ್ತಿದ್ದು ಪತ್ನಿಯನ್ನು ಪಾರ್ಲರ್‌ಗೆ ನಿತ್ಯವೂ ತನ್ನ ಬೈಕಿನಲ್ಲಿ ಬಿಟ್ಟು ಬರುತ್ತಿದ್ದರು.
ಮೃತರು ತಂದೆ, ತಾಯಿ , ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.