×
Ad

ಶ್ರೀನಿವಾಸ್ ಕಾಲೇಜು ದೂರು ಪ್ರಕರಣ: ಬಂಧಿತ ವಿದ್ಯಾರ್ಥಿಯ ಬಿಡುಗಡೆ

Update: 2016-09-10 22:04 IST

ಮಂಗಳೂರು, ಸೆ. 10: ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿದೆ ಎಂದು ನೀಡಲಾಗಿರುವ ದೂರಿನ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ವಿದ್ಯಾರ್ಥಿಯನ್ನು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಕಾಲೇಜಿನಲ್ಲಿ ಕೆಲವು ಹಿರಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ನಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಮೂವರ ಮೇಲೆ ಪ್ರಕರಣ ದಾಖಲಿಸಿ ಓರ್ವ ವಿದ್ಯಾರ್ಥಿಯನ್ನು ಕೇರಳದ ಆಲಪ್ಪುಝದಿಂದ ವಶಕ್ಕೆ ಪಡೆದಿದ್ದರು.

ಪ್ರಾಂಶುಪಾಲರು ಹೆಸರಿಸಿದ್ದ ನಾಲ್ವರ ವಿದ್ಯಾರ್ಥಿನಿಯರು ಶನಿವಾರ ಪೊಲೀಸರಿಗೆ ಮನವಿ ನೀಡಿ ನಮ್ಮ ಮೇಲೆ ರ್ಯಾಗಿಂಗ್ ಆಗಿಲ್ಲ ಎಂಬ ಹೇಳಿಕೆ ನೀಡಿದ್ದರು. ವಿದ್ಯಾರ್ಥಿಯ ಬಂಧನವನ್ನು ಪ್ರತಿಭಟಿಸಿ ಸಿಎಫ್‌ಐ ಕಾರ್ಯಕರ್ತರು ಶನಿವಾರ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News