ನಾಳೆ ಅಂತರ್ಜಾಲ ಪರೀಕ್ಷಾ ಕೇಂದ್ರ ಉದ್ಘಾಟನೆ
Update: 2016-09-11 00:20 IST
ಮಂಗಳೂರು, ಸೆ.10: ಮಂಗಳೂರಿನ ವಿಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ವತಿಯಿಂದ ಅಂತರ್ಜಾಲ ಪರೀಕ್ಷಾ ಕೇಂದ್ರ ಬೊಂದೇಲ್‌ನ ಬೆಸೆಂಟ್ ಪ್ರಾಂಗಣದಲ್ಲಿ ಸೆ.12ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕುಡ್ಪಿಜಗದೀಶ್ ಶೆಣೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಟಾಟಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಹರೀಶ್ ಭಟ್ ಉದ್ಘಾ ಟಿಸುವರು ಎಂದವರು ತಿಳಿಸಿದರು.