×
Ad

ಕಾಸರಗೋಡು ಜಿಲ್ಲೆಗೆ ವರ್ಗಾವಣೆಯಾದ ಗ್ರಾಮ ಅಧಿಕಾರಿ ಆತ್ಮಹತ್ಯೆ

Update: 2016-09-11 11:58 IST

ಕೊಲ್ಲಂ,ಸೆ.11: ಕಾಸರಗೋಡು ಜಿಲ್ಲೆಯ ಗಡಿಗ್ರಾಮವಾದ ಕಡಂಬಾರ್ ಗೆ ವರ್ಗಾವಣೆಗೊಂಡಿದ್ದನ್ನು ಪ್ರತಿಭಟಿಸಿ ಆತ್ಮಹತ್ಯೆಗೈದ ವಿಲೇಜ್ ಆಫೀಸರ್ ಪಾಲ್ ಥಾಮಸ್‌ಗೆ ಊರಿನವರು ಆಶ್ರುಭರಿತ ವಿದಾಯವನ್ನು ಕೋರಿದ್ದಾರೆಂದು ವರದಿಯಾಗಿದೆ.

  ಮೃತ ಪಾಲ್ ಎನ್‌ಜಿಒಆಸೋಸಿಯೇಶನ್‌ನ ಸಕ್ರಿಯ ಕಾರ್ಯಕರ್ತ ಆಗಿದ್ದರು. ಆ ಮೊದಲು ಅವರು ಕಲಕ್ಟರೇಟ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರನ್ನು ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಸರಗೋಡಿನ ಗಡಿಪ್ರದೇಶದ ಗ್ರಾಮವೊಂದಕ್ಕೆ ವರ್ಗಾವಣೆಗೊಳಿಸಲಾಗಿತ್ತು. ತನಗೆ ಭಾಷೆಯ ತೊಡಕು ಇದೆ ಅಲ್ಲಿ ಕೆಲಸಮಾಡಲು ಕಷ್ಟವಾಗಬಹುದು ಎಂದು ಮೇಲಧಿಕಾರಿಗಳನ್ನು ಕೋರಿದರೂ ವರ್ಗಾವಣೆ ಆದೇಶವನ್ನು ಮೇಲಧಿಕಾರಿಗಳು ಹಿಂಪಡೆದಿರಲಿಲ್ಲ. ಇದರಿಂದ ಮನನೊಂದು ಪಾಲ್ ಆತ್ಮಹತ್ಯೆ ಮಾಡಿಕೊಂಡರು ಎಂದು ಅವರು ಕಾರ್ಯಾಚರಿಸುತ್ತಿದ್ದ ಎನ್‌ಜಿಒ ಅಸೋಸಿಯೇಶನ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಮಂಞಾಡ್ ಹೋಲಿಕ್ರಾಸ್ ಚರ್ಚ್ ಮೃತ ವ್ಕಕ್ತಿಗೆ ಅಂತ್ಯಕ್ರಿಯೆ ನಡೆದಿದೆ. ಆತ್ಮ ಹತ್ಯೆಮಾಡಿಕೊಳ್ಳುವ ಮೊದಲು ಪಾಲ್ ಕನ್ನಡ ತುಳು ಭಾಷೆ ಮಾತಾಡುವ ಕಾಸರಗೋಡಿನ ಕಡಂಬಾರ್ ಗ್ರಾಮದಲ್ಲಿ ಕೆಲಸ ಮಾಡಲು ಕಷ್ಟವಿದೆ ಎಂದು ಅಧಿಕಾರಿಗಳಿಗೆ ತಿಳಿಸಿಯೂ ಪ್ರಯೋಜನವಾಗದ್ದಕ್ಕೆ ತುಂಬಾ ನೊಂದುಕೊಂಡಿದ್ದರೆಂದು ಅವರ ಪತ್ನಿ ಜೆಸಿ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News