ನಂತೂರು: ಕಂಟೈನರ್ ಢಿಕ್ಕಿ ಹೊಡೆದು ಅನಿಲ ಸಿಲಿಂಡರ್ ಸಾಗಾಟದ ಲಾರಿ ಪಲ್ಟಿ
Update: 2016-09-11 14:17 IST
ಮಂಗಳೂರು, ಸೆ.11: ಕಂಟೈನರ್ ಲಾರಿಯೊಂದು ಒಂದು ಢಿಕ್ಕಿ ಹೊಡೆದ ಪರಿಣಾಮ ಅನಿಲ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ನಂತೂರು ವೃತ್ತದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ. ಘಟನೆಯ ಪರಿಣಾಮವಾಗಿ ಪಲ್ಟಿಯಾದ ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದಿಂದ ಮೋಟಾರು ವಾಹನಗಳನ್ನು ಹೇರಿಕೊಂಡು ಕೇರಳದ ಕಡೆ ಸಾಗುತ್ತಿದ್ದ ಕಂಟೈನರ್ ಬಿಕರ್ನಕಟ್ಟೆ ಕಡೆಯಿಂದ ನಂತೂರಿನತ್ತ ಬರುತ್ತಿದ್ದ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಲಾರಿಯಲ್ಲಿದ್ದ ಚಾಲಕ, ನಿರ್ವಾಹಕ ಗಾಯಗೊಂಡಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಮಗುಚಿಬಿದ್ದ ಲಾರಿಯನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು.
ಪಲ್ಟಿಯಾದ ಲಾರಿಯಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳೆಲ್ಲವೂ ಖಾಲಿ ಆಗಿದ್ದುದರಿಂದ ಹೆಚ್ಚಿನ ಅವಘಡ ತಪ್ಪಿದೆ ಎನ್ನಲಾಗಿದೆ.
ವರದಿ: ಕಲೀಂ ಸೆರಾಜೆ