×
Ad

ಕಾಸರಗೋಡು: ಗ್ರಾಹಕನ ಸೋಗಿನಲ್ಲಿ ಬಂದು 57 ಸಾವಿರ ರೂ.ನ ಮೊಬೈಲ್ ಎಗರಿಸಿದ ಕಳ್ಳ!

Update: 2016-09-11 14:36 IST

ಕಾಸರಗೋಡು, ಸೆ.11: ಗ್ರಾಹಕನ ಸೋಗಿನಲ್ಲಿ ನಗರದ ಮೊಬೈಲ್ ಮಳಿಗೆಗೆ ಬಂದ ಯುವಕನೋರ್ವ ಸುಮಾರು 57 ಸಾವಿರ ರೂ. ವೌಲ್ಯದ ಮೊಬೈಲ್ ಸಹಿತ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಮೊಬೈಲ್ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೆಪ್ಟಂಬರ್ 9ರಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿದೆ. ಮಳಿಗೆಗೆ ಬಂದ ಯುವಕ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5 ಮೊಬೈಲ್ ನೀಡುವಂತೆ ಕೇಳಿದ್ದ. ಸೇಲ್ಸ್ಮ್ಯಾನ್‌ನ ಗಮನ ಬೇರೆಡೆ ಸೆಳೆದು ಮೊಬೈಲ್ ಸಹಿತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸೇಲ್ಸ್ಮ್ಯಾನ್ ಅಹ್ಮದ್ ಶಕೀರ್ ನೀಡಿರುವ ದೂರಿನಂತೆ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಸಿಸಿ ಟಿವಿ ದೃಶ್ಯಾವಳಿಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News