'ಬಕ್ರೀದ್ ಸಿಲ್‌ಸಿಲಾ' ವಿಶೇಷ ಕಾರ್ಯಕ್ರಮ

Update: 2016-09-11 10:01 GMT

ಮಂಗಳೂರು, ಸೆ.11: ಸಿಲ್‌ಸಿಲಾ ಮೀಡಿಯಾ ವತಿಯಿಂದ ಸೆ.12ರಂದು ವಿ4ನ್ಯೂಸ್ ಹಾಗೂ ದೈಜಿ ವರ್ಲ್ಡ್ ಚಾನೆಲ್‌ಗಳಲ್ಲಿ ಬಕ್ರೀದ್ ಸಿಲ್‌ಸಿಲಾ ವಿಶೇಷ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ವಿ4 ನ್ಯೂಸ್ ಚಾನೆಲ್‌ನಲ್ಲಿ ಬೆಳಗ್ಗೆ 10ರಿಂದ10:30, ಮಧ್ಯಾಹ್ನ 2ರಿಂದ 2:30, ಸಂಜೆ 5ರಿಂದ 5:30, ರಾತ್ರಿ 10:30ರಿಂದ 11ರ ತನಕ ಪ್ರಸಾರವಾಗಲಿದೆ. ಹಾಗೂ ದೈಜಿ ವರ್ಲ್ಡ್ ಚಾನೆಲ್‌ನಲ್ಲಿ ಬೆಳಗ್ಗೆ 10:30ಕ್ಕೆ ಹಾಗೂ ರಾತ್ರಿ 11ಕ್ಕೆ ಪ್ರಸಾರಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ, ಬುರ್ದಾಮಜ್ಲಿಸ್, ವಿವಿಧ ಭಾಷೆಗಳ ಹಾಡುಗಳು, ದಫ್ ಕಾರ್ಯಕ್ರಮ ಮುಂತಾದವುಗಳು ಮೂಡಿ ಬರಲಿದೆ ಎಂದು ನಿರ್ದೇಶಕ ಪಿ.ಎಸ್ ಮುಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News