ಪುತ್ತೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

Update: 2016-09-11 12:57 GMT

ಪುತ್ತೂರು, ಸೆ.11: ಆಟೊರಿಕ್ಷಾವೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಡಿಸಿಬಿಐ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಪುತ್ತೂರಿನ ಮೊಟ್ಟೆತ್ತಡ್ಕ ನಿವಾಸಿ ತಾರನಾಥ ಮತ್ತು ಒಳತ್ತಡ್ಕ ನಿವಾಸಿ ರಿಕ್ಷಾ ಚಾಲಕ ಹಮೀದ್ ಬಂಧಿತ ಆರೋಪಿಗಳು.

ಹಮೀದ್‌ನ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ರಿಕ್ಷಾವನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಿಂದ 1 ಕಿಲೋ 800 ಗ್ರಾಂ ಗಾಂಜಾ, 4,600 ನಗದು, 2 ಮೊಬೈಲ್ ಫೋನ್‌ಗಳು, ಮತ್ತು ಆಟೊರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳನ್ನು ನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ಕೇಸು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News