ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಆಳ್ವಾಸ್‌ಗೆ ಅವಳಿ ಪ್ರಶಸ್ತಿ
Update: 2016-09-11 18:43 IST
ಮೂಡುಬಿದಿರೆ, ಸೆ.11: ಸ್ವರಾಜ್ಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ಸೈಂಟ್ ಸೆಬಾಸ್ಟಿನ್ ಪಿ.ಯು. ಕಾಲೇಜು, ಉಳ್ಳಾಲ ತಂಡವನ್ನು 1 ಇನ್ನಿಂಗ್ಸ್ 12 ಅಂಕದಲ್ಲಿ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಆಳ್ವಾಸ್‌ನ ಬಾಲಕಿಯರ ತಂಡ ನಿರಂಜನ ಸ್ವಾಮಿ ಪಿ.ಯು. ಕಾಲೇಜು, ಸುಂಕದಕಟ್ಟೆ ತಂಡವನ್ನು 1 ಇನ್ನಿಂಗ್ಸ್ 05 ಅಂಕದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.