ಯುವ ಸಮುದಾಯದ ತಲ್ಲಣ ಅರ್ಥೈಸಿಕೊಳ್ಳಬೇಕು: ಡಾ.ಎಚ್.ಬಿ.ವಾಸು

Update: 2016-09-11 18:34 GMT

ಉಡುಪಿ, ಸೆ.11: ಇಂದಿನ ಯುವ ಸಮುದಾಯ ತಲ್ಲಣದಲ್ಲಿದೆ. ಹೊಸ ಬಗೆಯ ಚಿಂತನಾ ಕ್ರಮಗಳು ಅವರನ್ನು ಇಂತಹ ತಲ್ಲಣಗಳಿಗೆ ಗುರಿಮಾಡುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಈ ತಲ್ಲಣಗಳಿಗೆ ನಾವು ಕಿವಿ ಗೊಡದಿದ್ದರೆ ಅವರನ್ನು ಪ್ರಭುದ್ಧರನ್ನಾಗಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಹೋರಾಟಗಾರ ಡಾ.ಎಚ್.ಬಿ.ವಾಸು ಹೇಳಿದ್ದಾರೆ.

ಉಡುಪಿ ರಥಬೀದಿ ಗೆಳೆಯರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯ ಸಹಯೋಗ ದಲ್ಲಿ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸ ಲಾದ 'ಬಹುಮುಖಿ ಭಾರತ' ವೈಚಾರಿಕ ಸಾಹಿತ್ಯ- ಚಿಂತನ-ಮಂಥನ ಕಾರ್ಯಕ್ರಮದಲ್ಲಿ 'ಬಹುರೂಪಿ ಭಾರತ' ಎಂಬ ಗೋಷ್ಠಿಯ 'ಭಾರತದ ಮಹಿಳೆ ಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರ ಸ್ಥಿತಿಗತಿ' ಕುರಿತ ವೈಚಾರಿಕ ಸಂವಾದದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
 
21ನೆ ಶತಮಾನದಲ್ಲಿ ಚಳವಳಿ ಮಾಡಬೇಕಾದರೆ 20ನೆ ಶತಮಾನದ ಚಳವಳಿಯ ಪಾಠ ಮರೆಯ ಬಾರದು. ಆಧುನಿಕ ಭಾರತದ ನಿರ್ಮಾ ಣಕ್ಕೆ ಮಾಧ್ಯಮ ವರ್ಗದ ಪಾತ್ರ ಮುಖ್ಯ. ಅದಕ್ಕಾಗಿ ನಾವು ಆ ವರ್ಗದ ಜೊತೆಗೂಡಬೇಕು. ದಲಿತರು, ಅಸಂಘಟಿತ ಕಾರ್ಮಿಕರು ಹಾಗೂ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರೆ ಚಲನಶೀಲತೆ ತರಲು ಸಾಧ್ಯ ಎಂದು ಅವರು ತಿಳಿಸಿದರು. ಚರ್ಚೆಯಲ್ಲಿ ಮಾತನಾಡಿದ ಕೆ.ಎಲ್.ಅಶೋಕ್, ನಾವು ಕಾಲಕ್ಕೆ ತಕ್ಕಂತೆ ಬದಲಾವಣೆ ಗೊಂಡು ಹೊಸ ಪೀಳಿಗೆಯೊಂದಿಗೆ ಅನುಸಂಧಾನ ಹಾಗೂ ಮುಖಾಮುಖಿಯಾಗಬೇಕಾಗಿದೆ. ಆ ದಿಕ್ಕಿನಲ್ಲಿ ನಾವು ಇಂದು ಸಾಗಬೇಕಾಗಿದೆ. ಅದೇ ರೀತಿ ನಮಗೊಂದು ಪರ್ಯಾಯ ಮಾಧ್ಯಮ ಕೂಡ ಬೇಕಾಗಿದೆ. ಭಿನ್ನಾಭಿಪ್ರಾಯದೊಂದಿಗೆ ಸಹಬಾಳ್ವೆ, ದೃಢ ಬದ್ಧತೆಯ ನಡಿಗೆ ಇದ್ದರೆ ಎಲ್ಲವೂ ಸಾಧ್ಯ ಎಂದು ಅಭಿಪ್ರಾಯಪಟ್ಟರು.
 ಉಮಾಶಂಕರ್ ಮಾತನಾಡಿ, ಕೂಡಿ ಉಣ್ಣುವ, ಕೂಡಿಬಾಳುವ ಸಂಸ್ಕೃತಿಗೆ ಪರ್ಯಾಯ ಮಾರ್ಗ ಅನುಸರಿಸಬೇಕು. ಜಾತಿ ವಿನಾಶದತ್ತ ನಾವು ಸಾಗಬೇಕಾಗಿದೆ. ಆಹಾರ ಸಂಸ್ಕೃತಿಯ ಮೂಲಕ ಬೆಸೆಯುವ ಪ್ರಯತ್ನ ಮಾಡಬೇಕು. ಸಂವಿಧಾನದ ಎಲ್ಲ ಶಕ್ತಿಯನ್ನು ನಮ್ಮ ಶಕ್ತಿಯನ್ನಾಗಿಸಿ ಸಂವಿಧಾನ ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಪತ್ರಕರ್ತ ಎನ್.ಎ.ಎಂ.ಇಸ್ಮಾಯೀಲ್ ಮಾತ ನಾಡಿ, ಸಮಾನತೆ ಬೇಕೆಂದು ಎಲ್ಲ ಸಮುದಾಯ ದಲ್ಲಿ ಚಲನಶೀಲತೆ ಉಂಟಾಗಿದೆ. ಆದರೆ ಇದರಲ್ಲಿ ಕೆಲವರು ಮಾತ್ರ ಮುಂದೆ ಬರುತ್ತಿದ್ದಾರೆ. ಹಿಂದೆ ಉಳಿದುಕೊಂಡವರನ್ನು ಮುಂದೆ ಕರೆತರುವ ಕೆಲಸವಾಗುತ್ತಿಲ್ಲ. ಸರಕಾರದ ಮೀಸಲಾತಿ ಪಡಿತರ ಚೀಟಿಯಂತೆ ಕೆಲವರಿಗೆ ಮಾತ್ರ ದೊರೆಯುತ್ತಿದೆ. ಚಳವಳಿ, ಸಂಘಟನೆ, ರಾಜಕೀಯ ಪಕ್ಷಗಳು ಹೊಸ ಶೋಧನೆಯಲ್ಲಿ ತೊಡಗಿಸಿಕೊಂಡಿಲ್ಲ. ಮುಖ್ಯವಾಗಿ ನಮ್ಮ ಶಿಕ್ಷಣದಲ್ಲಿ ವಿಮೋಚನಾ ವೌಲ್ಯ ಇಲ್ಲವಾಗಿರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದರು.

ಸಂವಾದದಲ್ಲಿ ಸುಮಾ ಎಸ್., ರಂಗನಾಥ ಕಂಟನಕುಂಟೆ, ಬಿ.ಎಂ.ರೋಹಿಣಿ ಮೊದ ಲಾದವರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News