×
Ad

'ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ' ಪ್ರದಾನ

Update: 2016-09-12 00:07 IST

ಮಂಗಳೂರು, ಸೆ.11: ಕಲ್ಕೂರ ಪ್ರತಿಷ್ಠಾನ ದಿಂದ 'ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ-2016'ನ್ನು ಪಟ್ಲಗುತ್ತು ಮಹಾಬಲ ಶೆಟ್ಟಿಯವರಿಗೆ ಇಂದು ನಗರದ ಶಾರದಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೇದಮೂರ್ತಿ ಕಮಲದೇವಿ ಅಸ್ರಣ್ಣ, ಯಕ್ಷಗಾನ ರಂಗದಲ್ಲಿರುವ ವಿದ್ವಾಂಸರು ಅತೀ ಹೆಚ್ಚು ಜ್ಞಾನಿಗಳಾಗಿದ್ದಾರೆ. ಅಂತಹವರಲ್ಲಿ ಎಂ.ಎಸ್. ಸಾಮಗ ದೊಡ್ಡ ವಿದ್ವಾಂಸರಾಗಿದ್ದಾರೆ. ಜನಪದವಾಗಿದ್ದ ಯಕ್ಷಗಾನಕ್ಕೆ ವಿದ್ವಾಂಸರು ಸೇರಿಕೊಂಡ ಪರಿಣಾಮ ಶ್ರೇಷ್ಠವಾಗಿ ಬೆಳೆದಿದೆ ಎಂದರು.
ಎಂ.ಎಸ್. ಸಾಮಗರ ಒಡನಾಡಿ ಜಿ.ಆರ್. ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡಮಿಯ ಮಾಜಿ ಅಧ್ಯಕ್ಷ ಎಂ. ಎಲ್.ಸಾಮಗ ಮಾತನಾಡಿ, ಅಜ್ಞಾತ ಪ್ರತಿಭೆಗಳನ್ನು ಸಾಮಗರು ಮೆಚ್ಚಿಕೊಳ್ಳುತ್ತಿ ದ್ದಾರೆ. ಇದೀಗ ಮಹಾಬಲ ಶೆಟ್ಟಿಯವರಿಗೆ 'ಸಾಮಗ ಪ್ರಶಸ್ತಿ' ಸಿಕ್ಕಿರುವುದು ಸಂತಸ ತಂದಿದೆ ಎಂದು ಹೇಳಿದರು.
ವಿವಿಧ ಕಲಾ ಪ್ರಕಾರದಲ್ಲಿ ಮಿಂಚಿದ ಶ್ರೇಯದಾಸ್‌ರಿಗೆ 'ಕಲ್ಕೂರ ಬಾಲಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ 'ಪುಣ್ಯ ಸಂದೇಶ' ಎಂಬ ಯಕ್ಷಗಾನ ತಾಳಮದ್ದಲೆ ನಡೆಯಿತು.
ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿ.ಕೆ. ಭಟ್ ಸೇರಾಜೆ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್, ನಿರ್ದೇಶಕ ಕೆ.ಎಸ್.ಕಲ್ಲೂರಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News