ಪುಳಿತ್ತಡಿಯಲ್ಲಿ ಕೆಸರುಗದ್ದೆ ಕ್ರೀಡೋತ್ಸವ
ಉಪ್ಪಿನಂಗಡಿ, ಸೆ.11: ಗದ್ದೆ ಬೇಸಾಯ ದೊಂದಿಗೆ ಬೆರೆತುಹೋಗಿದ್ದ ಹಲವು ಆಚರಣೆಗಳು, ಕ್ರೀಡೆಗಳು ಇಂದು ಕಣ್ಮರೆ ಯಾಗಿವೆ. ನಮ್ಮ ಜನಪದೀಯ ಸಂಸ್ಕೃತಿಯನ್ನು ನೆನಪು ಮಾಡಿಕೊಳ್ಳಬೇಕಾದ ಅಗತ್ಯ ನಮ್ಮ ಮುಂದಿದೆ ಎಂದು ಬಿಜೆಪಿಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು ಹೇಳಿದರು.
ಜೇಸಿ ಸಪ್ತಾಹ 'ಸಪ್ತನಿಧಿ'ಯಂಗವಾಗಿ ಜೇಸಿಐ ಹಾಗೂ ಮಯೂರ ಮಿತ್ರ ವೃಂದ ಪುಳಿತ್ತಡಿ ಇದರ ಸಹಕಾರದೊಂದಿಗೆ ಪುಳಿತ್ತಡಿ ಯಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೇಸಿಐಯ ಆಡಳಿತ ವಿಭಾಗ 15ರ ವಲಯ ನಿರ್ದೇಶಕ ಸಂತೋಷ್ ಜಿ. ಮಾತ ನಾಡಿ, ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿ ದ್ದಂತೆ ಯುವ ಜನಾಂಗದ ಶಕ್ತಿ ಕುಂದುತ್ತಿದೆ. ಇಂದಿನ ಯುವಕರು ಮೊಬೈಲ್, ಸಾಮಾಜಿಕ ಜಾಲತಾಣಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿದ್ದಾರೆ. ಇದರೊಂದಿಗೆ ಮಾದಕ ವ್ಯಸನಕ್ಕೂ ಬಲಿಯಾಗುತ್ತಿದ್ದಾರೆ. ಯುವಕರು ಸಮಾಜಮುಖಿ ಚಟುವಟಿಕೆ ಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳಲ್ಲಿ ತೊಡ ಗಿಸಿಕೊಳ್ಳಬೇಕು ಎಂದರು.
ಗದ್ದೆಯಲ್ಲಿ 'ಕಾಪು' ಇಟ್ಟು ನೇಜಿ ನೆಡುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡ ಲಾಯಿತು. ಜೇಸಿಐ ರಾಷ್ಟ್ರೀಯ ಕೋ-ಆರ್ಡಿನೇಟರ್ ಅನಿಲ್ ಕುಮಾರ್ ಮಾತನಾಡಿ, ಕೆಸರುಗದ್ದೆ ಕ್ರೀಡೆಗಳನ್ನು ನಡೆಸುವ ಮೂಲಕ ಮುಂದಿನ ಪೀಳಿಗೆ ಗದ್ದೆ ಕೃಷಿಯತ್ತ ಆಕರ್ಷಿತರಾಗುವಂತೆ ಮಾಡಬೇಕು ಎಂದರು.
ಜೇಸಿಐ ತರಬೇತುದಾರ ಗಂಗಾಧರ ಬೆಳ್ಳಾರೆಯವರ ನಿಧನಕ್ಕೆ ಸಂತಾಪ ಸೂಚಿಸಿ ಕಾರ್ಯಕ್ರಮದ ಆರಂಭದಲ್ಲಿ ವೌನಪ್ರಾರ್ಥನೆ ನಡೆಸಲಾಯಿತು. ಕ್ರೀಡೋತ್ಸವಕ್ಕೆ ಸಹಕರಿಸಿದ ಗದ್ದೆಯ ಮಾಲಕ ಜಗದೀಶ್ ಪರಕ್ಕಜೆಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪುಳಿತ್ತಡಿ ಮಯೂರ ಮಿತ್ರವೃಂದದ ಅಧ್ಯಕ್ಷ ಗಿರೀಶ್ ಆರ್ತಿಲ, ಉಪ್ಪಿನಂಗಡಿ ಜೇಸಿಐ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಜಯಾನಂದ ಕಲ್ಲಾಪು, ಪ್ರಮುಖರಾದ ವಿಜಯಕುಮಾರ್ ಕಲ್ಲಳಿಕೆ, ಅನಿಲ್ ಕುಮಾರ್ ಉಪ್ಪಿನಂಗಡಿ, ುನೀಲ್ ಕುಮಾರ್ ದಡ್ಡು, ಶೇಖರ ಪೂಜಾರಿ ಗೌಂಡತ್ತಿಗೆ, ಮುನೀರ್ ದಾವೂದ್, ಜಯಂತ ಪೊರೋಳಿ, ಸುಂದರ ಗೌಡ ಅರ್ಬಿ, ಕರುಣಾಕರ ಸುವರ್ಣ, ಗೋವಿಂದ ಪ್ರಸಾದ್ ಕಜೆ, ಸುಭಾಶ್ ಜೈನ್, ಪ್ರಶಾಂತ್, ಹರೀಶ್ ನಾಯಕ್ ನಟ್ಟಿಬೈಲ್, ರಾಘವೇಂದ್ರ ನಾಯಕ್ ನಟ್ಟಿಬೈಲ್, ಸುಚಿನ್ ರಾಜ್, ಪುರುಷೋತ್ತಮ ಮುಂಗ್ಲಿ ಮನೆ, ಅನೂಪ್ ಸಿಂಗ್, ಶಿವಕುಮಾರ್ ಬಾರಿತ್ತಾಯ, ಕೇಶವ ರಂಗಾಜೆ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯ ಸುರೇಶ್ ಅತ್ರಮಜಲು ಸ್ವಾಗತಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ಕಾರ್ಯದರ್ಶಿ ಶಶಿಧರ್ ನೆಕ್ಕಿಲಾಡಿ ವಂದಿಸಿ ದರು. ರಾಮಕೃಷ್ಣ ಪಡುಮಲೆ, ಬೊಮ್ಮಯ್ಯ ಬಂಗೇರ ತೀರ್ಪುಗಾರರಾಗಿದ್ದರು.