ಮಂಗಳೂರಿಗೆ ಕೋಸ್ಟ್ ಗಾರ್ಡ್ ಕಣ್ಗಾವಲು
Update: 2016-09-12 00:16 IST
ಮಂಗಳೂರು, ಸೆ.11: ಮಂಗಳೂ ರನ್ನು ಕೇಂದ್ರವಾಗಿಟ್ಟುಕೊಂಡು ಇಂಡಿಯನ್ ಕೋಸ್ಟ್ ಗಾರ್ಡ್ ವಾಯು ಮಾರ್ಗದಲ್ಲಿ ನಿಗಾ ವಹಿಸುವ ಯೋಜನೆಗೆ ಶನಿವಾರ ಚಾಲನೆ ನೀಡಿದೆ. ಮಂಗಳೂರು ವಿಮಾನ ನಿಲ್ದಾಣದ ಹಳೆ ಟರ್ಮಿನಲ್ ಕಟ್ಟಡದಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ವಾಯು ನೆಲೆಯನ್ನು ಭಾರತೀಯ ತಟ ರಕ್ಷಣಾ ಪಡೆಯ ಡೈರಕ್ಟರ್ ಜನರಲ್ ರಾಜೇಂದ್ರ ಸಿಂಗ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೋಸ್ ್ಟಗಾರ್ಡ್ ಅಧಿಕಾರಿಗಳ ಮಹಿಳಾ ಸಂಘದ ಅಧ್ಯಕ್ಷೆ ಊರ್ಮಿಳಾ ಸಿಂಗ್, ಕೋಸ್ಟ್ ಗಾರ್ಡ್‌ನ ಎಡಿಜಿ ಕೆ.ನಟರಾಜನ್, ಕೋಸ್ಟ್‌ಗಾರ್ಡ್ ಕಮಾಂಡೆಂಟ್ ಪಿ.ಕೆ.ಜಸ್ವಾಲ್ ಮೊದಲಾದವರು ಉಪಸ್ಥಿತರಿದ್ದರು.