×
Ad

ಗೋವಿನ ಬಗ್ಗೆ ಸುಳ್ಳುಗಳಿಂದ ಹಿಂಸೆಗೆ ಪ್ರಚೋದನೆ: ಜಿ.ರಾಜಶೇಖರ್

Update: 2016-09-12 00:17 IST

ಉಡುಪಿ, ಸೆ.11: ಗೋಹತ್ಯೆ ಹಾಗೂ ಗೋಮೂತ್ರ ಔಷಧ ಎಂಬ ಕುರಿತ ಅರ್ಥಶಾಸ್ತ್ರದ ಬಗ್ಗೆ ಸಂಘ ಪರಿವಾರ ಹಸಿಹಸಿ ಸುಳ್ಳುಗಳನ್ನು ಹೇಳಿ ಹಿಂಸೆಯನ್ನು ಪ್ರಚೋದಿಸುತ್ತಿದೆ. ಈ ಮೂಲಕ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಆರೋಪಿಸಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಸಹಯೋಗದಲ್ಲಿ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಬಹುಮುಖಿ ಭಾರತ’ ವೈಚಾರಿಕ ಸಾಹಿತ್ಯ- ಚಿಂತನ -ಮಂಥನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಮೃತಪಟ್ಟ 3,000 ಜೀವಗಳೇ ಅಮೂಲ್ಯ ಎಂಬುದಾಗಿ ಅಮೆರಿಕ ನಂಬಿದೆ. ಅಲ್ಲದೆ ಬೇರೆಯ ವರನ್ನು ಕೂಡ ನಂಬಿಸಿದೆ. ಆದರೆ ಅದಕ್ಕೆ ಪ್ರತಿಯಾಗಿ ನಡೆದ ದಾಳಿಯ ಪರಿಣಾಮ ಇರಾಕ್, ಅಫ್ಘಾನಿಸ್ತಾನದಲ್ಲಿ ಅಮೆರಿಕ ಬಲಿ ತೆಗೆದುಕೊಂಡ 30 ಲಕ್ಷ ನಾಗರಿಕರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಇದೇ ರೀತಿಯ ಅಮೆರಿಕನ್ ವೌಲ್ಯಗಳು ಇಂದು ನಮ್ಮಲ್ಲಿಯೂ ಅಂತರ್ಗತವಾಗುತ್ತಿವೆ. ಹಿಂದೂಗಳ ಹೊರತು ಬೇರೆ ಧರ್ಮದವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆಂದು ಅವರು ಖೇದ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ಸಾಹಿತಿ ಕೆ.ಸತ್ಯನಾರಾಯಣ ಬೆಂಗಳೂರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾರ್ಯಕ್ರಮದ ಫಲಾನುಭವಿಗಳು ಇಂದು ನರೇಂದ್ರ ಮೋದಿಯ ಹಿಂದೆ ಹೋಗುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ಹಿಂದುಳಿದ ವರ್ಗದವರನ್ನು ನಾವು ಅನರ್ಥ ಮಾಡಿಕೊಳ್ಳುವುದು ಸರಿಯಲ್ಲ. ಇಂದಿರಾ ಗಾಂಧಿಯನ್ನೇ ಬದಲಾಯಿಸಿರುವ ಈ ಜನಕ್ಕೆ ನಾಳೆ ಮೋದಿ ಬೇಡವಾದರೆ ಅವರನ್ನು ಕೂಡ ಬದಲಾಯಿಸುತ್ತಾರೆ. ಆದ್ದರಿಂದ ಈ ಬಗ್ಗೆ ಆತಂಕ ಬೇಕಾ ಗಿಲ್ಲ. ಇದೆಲ್ಲ ಚಲನಶೀಲತೆಯ ಪರಿಕಲ್ಪನೆ ಎಂದರು.

ಮುಖ್ಯ ಅತಿಥಿಯಾಗಿ ನ.ರವಿಕುಮಾರ್ ಮಾತನಾಡಿ ದರು. ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಳೀಧರ್ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ಉಪಾಧ್ಯಕ್ಷ ಸಂತೋಷ್ ಬಲ್ಲಾಳ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ದರು. ಪ್ರಭಾಕರ್ ತುಮರಿ ಕಾರ್ಯಕ್ರಮ ನಿರೂಪಿಸಿದರು.

 ರಾಜಕೀಯ ಕಾರಣಕ್ಕಾಗಿ ಪ್ರವೀಣ್ ಹತ್ಯೆ 
ಉಡುಪಿ ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ನಡೆದ ಎರಡು ಕೊಲೆ ಪ್ರಕರಣಗಳಿಗೆ ಮಾಧ್ಯಮಗಳು ಭಿನ್ನ ರೀತಿಯ ಪ್ರಚಾರ ನೀಡಿದವು. ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದರೂ ಅದಕ್ಕೆ ಮಾಧ್ಯಮಗಳು ಔಚಿತ್ಯ ಮೀರಿದ ಪ್ರಚಾರ ನೀಡಿತು. ಆದರೆ ಅದರ ನಂತರ ನಡೆದ ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ರಾಜಕೀಯ ಕಾರಣಕ್ಕೆ ನಡೆದರೂ ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲ ಎಂದು ಜಿ.ರಾಜಶೇಖರ್ ದೂರಿದರು.
ಪ್ರವೀಣ್ ಪೂಜಾರಿ ಹತ್ಯೆಯು ಆರೆಸ್ಸೆಸ್‌ನ ರಾಜಕೀಯ ಕಾರ್ಯಕ್ರಮದ ಅನುಷ್ಠಾನದ ಭಾಗವಾಗಿ ನಡೆದ ಕೃತ್ಯವಾ ಗಿದೆ. ಆದರೆ ಈ ಹತ್ಯೆಯನ್ನು ರಾಜಕೀಯ ಪಕ್ಷಗಳು ಬದಿಗೆ ಸರಿಯುವಂತೆ ಮಾಡಿವೆ. ಆದುದರಿಂದ ಈ ಕೊಲೆಯನ್ನು ಖಂಡಿಸಿ ಅದರ ಹಿಂದಿರುವ ರಾಜ ಕೀಯವನ್ನು ಮುನ್ನೆಲೆಗೆ ತರಬೇಕಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News