×
Ad

ಉಡುಪಿಯಲ್ಲಿ ಈದುಲ್ ಅಝ್‌ಹಾ ಸಡಗರ

Update: 2016-09-12 10:35 IST

ಉಡುಪಿ, ಸೆ.12: ಉಡುಪಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ-ಸಡಗರದಿಂದ ಆಚರಿಸಿದರು.

ಉಡುಪಿ ಜಾಮಿಯಾ ಮಸೀದಿಯಲ್ಲಿ ಇಮಾಂ ಮೌಲಾನಾ ಅಬ್ದುರ್ರಶೀದ್ ನಝ್ವಿ ಹಾಗೂ ಉಡುಪಿ ಸಿಟಿಬಸ್ ನಿಲ್ದಾಣ ಬಳಿಯ ಅಂಜುಮಾನ್ ಮಸೀದಿಯಲ್ಲಿ ಇಮಾಂ ಮೌಲಾನಾ ಇನಾಯತುಲ್ಲಾ ರಝ್ವಿ ಅವರ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು. ನೂರಾರು ಮಂದಿ ನಮಾಝ್‌ನಲ್ಲಿ ಪಾಲ್ಗೊಂಡು, ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್‌ನ ಕೇಂದ್ರ ಮಸೀದಿಯಾಗಿರುವ ಮೂಳೂರು ಜುಮಾ ಮಸೀದಿಯಲ್ಲಿ ಬಿ.ಕೆ. ಅಬ್ದುರ್ರಹ್ಮಾನ್ ಮಅದನಿ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು.

ಕಟಪಾಡಿ ಜುಮಾ ಮಸೀದಿಯಲ್ಲಿ ಖತೀಬ್ ಬಶೀರ್ ಮಅದನಿ ಮತ್ತು ಕಾಪು ಪೊಲಿಪು ಜುಮಾ ಮಸೀದಿಯಲ್ಲಿ ಖತೀಬ್ ಇರ್ಷಾದ್ ಸಅದಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿತು.

ಕುಂದಾಪುರ, ಬ್ರಹ್ಮಾವರ ಸೇಡಿದಂತೆ ಜಿಲ್ಲೆಯ ಇತರ ಭಾಗಗಳಲ್ಲೂ ಮುಸ್ಲಿಂ ಬಾಂಧವರು ಸಡಗರದಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News