ಉಡುಪಿ: ಸರ್ವಧರ್ಮೀಯರಿಗೆ ಸಿಹಿ ಹಂಚಿ ಈದುಲ್ ಅಝ್ ಹಾ ಆಚರಣೆ
Update: 2016-09-12 10:52 IST
ಉಡುಪಿ,ಸೆ.12: ಉಡುಪಿ ಬ್ರಹ್ಮಗಿರಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭ ಮುಸ್ಲಿಂ ಬಾಂಧವರು ಸರ್ವಧರ್ಮೀಯರಿಗೆ ಸಿಹಿತಿಂಡಿಗಳನ್ನು ಹಂಚಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.
ಬೆಳಗ್ಗೆ 8 ಗಂಟೆಗೆ ಮಸೀದಿಯಲ್ಲಿ ಮೌಲಾನಾ ಹಾಶಿಮ್ ಉಮ್ರಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ನೆರವೇರಿತು. ಮಹಿಳೆಯರು ಮಕ್ಕಳ ಸಹಿತ ನೂರಾರು ಮಂದಿ ನಮಾಝ್‌ನಲ್ಲಿ ಪಾಲ್ಗೊಂಡಿದ್ದರು.
ಬಳಿಕ ಮುಸ್ಲಿಂ ಬಾಂಧವರು ಮಸೀದಿಯ ಸುತ್ತಮುತ್ತಲಿನ ಸರ್ವಧರ್ಮೀಯರ ಮನೆಗಳಿಗೆ ತೆರಳಿ ಸಿಹಿ ತಿಂಡಿಗಳನ್ನು ಹಂಚಿ ಶುಭಾಶಯಗಳನ್ನು ಕೋರಿದರು.