ಸೆ.30ರೊಳಗೆ ಆಧಾರ್ ಲಿಂಕ್ ಮಾಡದ ಸದಸ್ಯರ ಪಡಿತರ ರದ್ದು: ಸಚಿವ ಖಾದರ್
ಮಂಗಳೂರು, ಸೆ.12: ಸೆ.30ರ ರೇಶನ್‌ಕಾರ್ಡ್‌ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಸೆ.30 ಕೊನೆಯ ದಿನಾಂಕವಾಗಿದ್ದು, ಬಳಿಕವೂ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದ ಪಡಿತರ ಚೀಟಿಯಲ್ಲಿರುವ ಸದಸ್ಯರ ಪಡಿತರ ಕಡಿತ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ತರುತ್ತಿದ್ದು ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೂ ನಮ್ಕ ಇಲಾಖೆಯ ಮೀಟರ್ ಉಪಯೋಗಿಸುವ ಬಗ್ಗೆ ಇಲಾಖೆ ಚಿಂತಿಸುತ್ತಿದೆ. ಆನ್‌ಲೈನ್ ವ್ಯಾಪಾರದಲ್ಲಿ ವಂಚನೆಯಾದಾಗ ಕ್ರಮ ತೆಗೆದುಕೊಳ್ಳಲು ಬೇಕಾದ ಪ್ರಯತ್ನ ಮಾಡಲಾಗುವುದು. ಇಲಾಖಾ ವ್ಯಾಪ್ತಿಯಲ್ಲಿ ಇಲ್ಲದೆ ಇರುವುದನ್ನು ಇಲಾಖಾ ವ್ಯಾಪ್ತಿಯ ನಿಯಂತ್ರಣ ತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಗ್ರಾಹಕರು ಖರೀದಿಸುವ ಸಾಮಗ್ರಿಗಳ ತೂಕದಲ್ಲಿ ವಂಚನೆಯಾಗಬಾರದೆಂಬ ನಿಟ್ಟಿನಲ್ಲಿ ರಾಜ್ಯದ 450 ಮಾಲ್‌ಗಳಲ್ಲಿ ತೂಕದ ಯಂತ್ರಗಳನ್ನು ಇಡಲಾಗುವುದು. ಎಪಿಎಂಸಿಗೆ ರೈತರು ತರುವ ಬೆಳೆಗಳ ತೂಕದಲ್ಲಿ ಮೋಸವಾಗವಾರದೆಂಬ ನಿಟ್ಟಿನಲ್ಲಿ ಅಲ್ಲಿಯೂ ತೂಕದ ಯಂತ್ರಗಳನ್ನು ಇಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.