ತಮಿಳುನಾಡಿನ ಈ ಗ್ರಾಮದ ಎಲ್ಲ 8,856 ಜನರು 'ದೇಶದ್ರೋಹಿಗಳು' ?

Update: 2016-09-12 10:10 GMT

ಚೆನ್ನೈ : ಸರಕಾರವನ್ನು ಟೀಕಿಸಿದ ಮಾತ್ರಕ್ಕೆ ದೇಶದ್ರೋಹ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಸೆಪ್ಟೆಂಬರ್ 5 ರ ತೀರ್ಪಿನಲ್ಲಿ ಹೇಳಿರಬಹುದು. ಆದರೆ ತಮಿಳುನಾಡಿನ ಇಡಿಂಥಿಕರೈ ಎಂಬ ಗ್ರಾಮದ ಸುಮಾರು 10,000 ಕ್ಕೂ ಅಧಿಕ ಜನರು ಸೆಕ್ಷನ್ 124ಎ ಅನ್ವಯ ದೇಶದ್ರೋಹದ ಪ್ರಕರಣ ಎದುರಿಸುವ ಭಯದ ನೆರಳಿನಲ್ಲೇ ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಅವರು ಕೂಡಂಕುಲಂ ಅಣು ವಿದ್ಯುತ್ ಸ್ಥಾವರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ.

ಸುಪ್ರೀಂ ಕೋರ್ಟಿನ ಸೆಪ್ಟೆಂಬರ್ 5 ರ ತೀರ್ಪು ಇದನ್ನು ಗೆದ್ದ ಇಡಿಂಥಕರೈ ಗ್ರಾಮದ ಎಸ್ ಪಿ ಉದಯಕುಮಾರ್ ಅವರ ಒಂದು ಪ್ರಕರಣವಿರಬಹುದು ಆದರೆ ಈ ಗ್ರಾಮದ 140 ಮಂದಿ ಇತರರ ವಿರುದ್ಧ ಇಂತಹುದೇ ಪ್ರಕರಣಗಳು ದಾಖಲಾಗಿವೆ.
ಉದಯ್ ಕುಮಾರ್ ಅವರ ನೇತೃತ್ವದಲ್ಲಿ ಇಡಿಂಥಕರೈ ಹಾಗೂ ನೆರೆಯ ಕೂಡಂಕುಲಂ ಗ್ರಾಮದಲ್ಲಿ 2011 ರಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಒಟ್ಟು 8,856 ಜನರ ವಿರುದ್ಧ 21 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ. ದೇಶದಲ್ಲಿ ಇಂತಹ ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ದೃಷ್ಟಾಂತ ಇದಾಗಿದೆ.
ಇಲ್ಲಿ ದಾಖಲಿಸಲಾದ ಒಟ್ಟು 380 ಎಫ್‌ಐಆರ್ ಗಳು(ಇವುಗಳಲ್ಲಿ 240 ಪ್ರಕರಣಗಳನ್ನು ಅಕ್ಟೊಂಬರ್ 2014 ರಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ಹಿಂದಕ್ಕೆ ಪಡೆಯಲಾಗಿದೆ), ಮೊದಲಾಗಿ ಉದಯ ಕುಮಾರ್ ಹೆಸರನ್ನು ಉಲ್ಲೇಖಿಸಿ ನಂತರ ಐದರಿಂದ 10 ಇತರ ಆರೋಪಿಗಳನ್ನು ಹೆಸರಿಸಿ ನಂತರ 200 ಅಥವಾ 3000 ಮಂದಿ ಇತರರು ಎಂದು ಹೇಳಿವೆ.

ಹೀಗೆ ಮಾಡಿರುವುದು ಕೇವಲ ಜನರನ್ನುಹೆದರಿಸಲು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.ಹೆಚ್ಚಿನ ಆರೋಪಿ ಗ್ರಾಮಸ್ಥರ ವಿರುದ್ಧ ಸೆಕ್ಷನ್ 121 ಅನ್ವಯ 21 ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಸರಕಾರದ ವಿರುದ್ಧ ಯುದ್ಧ ಹೇರಿದಆರೋಪ ಹೊರಿಸಲಾಗಿದೆ.
ತಮ್ಮ ವಿರುದ್ಧದ ಪ್ರಕರಣ ಏನಾಯಿತೆಂದು ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಇಲ್ಲಿಯ ತನಕ ಯಾರ ವಿರುದ್ಧದ ದೇಶದ್ರೋಹ ಪ್ರಕರಣವನ್ನೂ ಕೈಬಿಡಲಾಗಿಲ್ಲ.

ಇಡಿಂಥಕರೈ ಗ್ರಾಮದ ಹೆಚ್ಚಿನ ಜನರು ಕ್ರೈಸ್ತರಾಗಿದ್ದುಇಲ್ಲಿನ ಹಿಂದೂ ಕುಟುಂಬಗಳ ಸಂಖ್ಯೆ ನೂರಕ್ಕೂ ಕಡಿಮೆ. ಕೂಡಂಕುಲಂ ಯೋಜನೆಯ ವಿರುದ್ಧದ ನಡೆಸುತ್ತಿರುವ ಪ್ರತಿಭಟನೆ ಇಲ್ಲಿ 1,850 ಕ್ಕೂ ಹೆಚ್ಚಿನ ದಿನಗಳನ್ನು ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News