ಉಡುಪಿ: ಮರಳು ಸಮಸ್ಯೆ ಕುರಿತು ಸಮಾಲೋಚನಾ ಸಭೆ

Update: 2016-09-12 15:24 GMT

ಉಡುಪಿ, ಸೆ.12: ಜಿಲ್ಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ನಾಲ್ಕು ತಿಂಗಳಿನಿಂದ ಕಾಣಿಸಿಕೊಂಡಿರುವ ಮರಳಿನ ಅಭಾವದಿಂದ ಉಂಟಾಗಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಸಮಾಲೋಚನಾ ಸಭೆಯೊಂದು ಇಂದು ಬನ್ನಂಜೆಯಲ್ಲಿರುವ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಮರಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು ಪಾಲ್ಗೊಂಡು ಮರಳಿನ ಅಭಾವದಿಂದ ಉಡುಪಿ ಜಿಲ್ಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ವಿವರಿಸಿದರು. ಸಮಸ್ಯೆಯ ವಿವಿಧ ಆಯಾಮಗಳಲ್ಲಿ ಸುದೀರ್ಘ ಚರ್ಚೆ ನಡೆದು, ಸೆ.13ರಂದು ಚೆನ್ನೈ ಹಸಿರು ಪೀಠದಿಂದ ಬರುವ ತೀರ್ಪನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.

ತೀರ್ಪಿನ ನಂತರ ಸರಕಾರದ ಕ್ರಮವನ್ನು ಪರಿಶೀಲಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗೆ ಪ್ರತ್ಯೇಕವಾದ ಮರಳು ನೀತಿಯೊಂದನ್ನು ಜಾರಿಗೊಳಿಸಲು ಸರಕಾರವನ್ನು ಒತ್ತಾಯಿಸಲಾಯಿತು.

ಸಮಾಲೋಚನಾ ಸಭೆಯಲ್ಲಿ ಬಿಲ್ಡರ್ಸ್‌ ಅಸೋಸಿಯೇಷನ್‌ನ ಜೆರ್ರಿ ವಿನ್ಸೆಂಟ್ ಡಯಾನ್, ಮನೋಹರ್ ಶೆಟ್ಟಿ, ರಂಜನ್ ಕಲ್ಕೂರ, ವಿವಿಧ ಸಂಘಟನೆಗಳ ಜನನಿ ದಿವಾಕರ ಶೆಟ್ಟಿ, ರವಿಶೆಟ್ಟಿ, ರಮೇಶ್ ಶೆಟ್ಟಿ, ಐಕಳಬಾವ ಚಿತ್ತರಂಜನ್‌ದಾಸ ಶೆಟ್ಟಿ, ವಿಜಯಕುಮಾರ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News