×
Ad

ಸೆ. 14ರಂದು ಆಕಾಶವಾಣಿಯಲ್ಲಿ ಸಚಿವ ಖಾದರ್ ಸಂದರ್ಶನ ಪ್ರಸಾರ

Update: 2016-09-12 23:59 IST

ಮಂಗಳೂರು, ಸೆ.13:ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ಜನಪರ ಯೋಜನೆಗಳ ಸರಣಿ ಕಾರ್ಯಕ್ರಮದಲ್ಲಿ ಸೆ.14 ರಂದು ಬೆಳಿಗ್ಗೆ 8:50 ರಿಂದ 9:30ರವರೆಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಜೊತೆ ನಡೆಸಿದ ಸಂದರ್ಶನ ಪ್ರಸಾರವಾಗಲಿದೆ.

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಕೈಗೊಂಡ ನೂತನ ಯೋಜನೆಗಳಾದ ರೇಶನ್ ಕೂಪನ್ ವ್ಯವಸ್ಥೆ, ಆನ್‌ಲೈನ್ ಪಡಿತರ ಚೀಟಿ, ಬೆಲೆ ಏರಿಕೆಗೆ ಇಲಾಖೆಯ ಕೈಗೊಂಡ ತಡೆ ವಿಧಾನ, ಪಡಿತರ ಚೀಟಿಯಲ್ಲಿ ಇನ್ನಷ್ಟು ಸಾಮಾಗ್ರಿ ಸೇರ್ಪಡೆ, ನ್ಯಾಯಬೆಲೆ ಅಂಗಡಿಗಳಲ್ಲಿ ಏರ್ ಟಿಕೇಟ್, ಬಸ್ ಟಿಕೇಟು ಸೌಲಭ್ಯ, ಎಪಿಎಲ್ , ಬಿಪಿಎಲ್ ಪಡಿತರ ಚೀಟಿಗಳನ್ನು ಆದ್ಯತೆ ಮತ್ತು ಆದ್ಯತೆ ರಹಿತ ಚೀಟಿಗಳಾಗಿ ಪರಿವರ್ತನೆ, ಮಾಲ್, ಸುಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್‌ಗಳಲ್ಲಿ ನಡೆಯುವ ತೂಕ ಮೋಸ ತಡೆಗೆ ಇಲಾಖೆಯ ತೂಕ ಯಂತ್ರ ಅಳವಡಿಕೆ, ಪಡಿತರ ಸೂರ್ಯಕಾಂತಿ ಎಣ್ಣೆ ತರಣೆ, ನ್ಯಾಯಬೆಲೆ ಅಂಗಡಿ ಜಾಲ ವ್ಯವಸ್ಥೆಯ ಸುಧಾರಣೆ, ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರಳೀಕರಣ ವ್ಯವಸ್ಥೆಗಳ ಕುರಿತಾಗಿ ಸಮಗ್ರ ಮಾಹಿತಿ ಮೂಡಿ ಬರಲಿದೆ.

ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಅವರು ಸಚಿವರನ್ನು ಸಂದರ್ಶಿಸಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ. ವಸಂತಕುಮಾರ್ ಪೆರ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News