×
Ad

ಮಾದಕವಸ್ತು ಸಾಗಾಟ: ಚೀನಾದಲ್ಲಿ ಒಬ್ಬ ವಿದ್ಯಾರ್ಥಿ ಸಹಿತ ಐವರು ಭಾರತೀಯರ ಬಂಧನ

Update: 2016-09-13 17:29 IST

ಬೀಜಿಂಗ್, ಸೆಪ್ಟಂಬರ್ 13: ಮಾದಕವಸ್ತು ಸಾಗಾಟಕ್ಕೆ ಯತ್ನಿಸಿದ ಐವರು ಭಾರತೀಯ ವ್ಯಕ್ತಿಗಳನ್ನು ಚೀನಾದಲ್ಲಿ ಬಂಧಿಸಲಾಗಿದೆ. ಚೀನಾದ ಕ್ಯೂಮಿಂಗ್ ಸಿಟಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 27 ಕಿಲೋ ಹಾಶಿಷ್‌ನ್ನು ಹೊಂದಿದ್ದ ಭಾರತೀಯ ಪ್ರಜೆಗಳು ಚೀನಾ ಪೊಲೀಸರ ವಶವಾಗಿದ್ದಾರೆ. ಬಂಧಿಸಿದವರಲ್ಲಿ ಒಬ್ಬಾತ ಕೋಲ್ಕತಾದ ಶ್ಯಾಮಪ್ರಸಾದ್ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಕ್ಯೂಮಿಂಗ್ ವಿಮಾನ ನಿಲ್ದಾಣದಲ್ಲಿ ತಪಾಸಣೆಯ ವೇಳೆ ಮಾದಕವಸ್ತು ಇವರಲ್ಲಿ ಪತ್ತೆಯಾಗಿತ್ತು. ಸ್ನಾಕ್ಸ್ ಪ್ಯಾಕೆಟ್‌ಗಳೊಳಗೆ, ಲ್ಯಾಪ್‌ಟಾಪ್ ಬ್ಯಾಗ್‌ನ ಫಾಮ್‌ನ ಒಳಗೆ ಮಾದಕವಸ್ತು ಅಡಗಿಸಿಡಲಾಗಿತ್ತು. ಆದರೆ ಹಾಶಿಷ್ ಸಾಗಾಟಕ್ಕೆ ಯತ್ನಿಸಿದ್ದೇವೆ ಎಂಬುದನ್ನು ಆರೋಪಿಗಳು ನಿರಾಕರಿಸಿದ್ದಾರೆ. ಚೀನಾದಲ್ಲಿ ಮಾದಕವಸ್ತು ಸಾಗಾಟ ಸಾಬೀತಾದರೆ ಅಲ್ಲಿನ ಕಾನೂನಿನಂತೆ ಗಲ್ಲುಶಿಕ್ಷೆ ನೀಡಲಾಗುತ್ತದೆ. ಆಗಸ್ಟ್ 26ಕ್ಕೆ ಕೊಲ್ಕತಾದ ಒಬ್ಬರನ್ನು ಒಂಬತ್ತು ಕಿಲೋ ಮಾದಕವಸ್ತುಗಳೊಂದಿಗೆ ಚೀನಾ ಪೊಲೀಸರು ಸೆರೆಹಿಡಿದಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News