ಬಂಟ್ವಾಳ: ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿ ಸಹಿತ ಲಾರಿ ವಶ
Update: 2016-09-13 17:34 IST
ಬಂಟ್ವಾಳ, ಸೆ.13: ಬಂಟ್ವಾಳ ಮೂಡ ಗ್ರಾಮದ ಮಯ್ಯರಬೈಲು ಎಂಬಲ್ಲಿ ಅಕ್ರಮವಾಗಿ ಪರವಾನಿಗೆ ಇಲ್ಲದೇ ಮೂಡಿಗೆರೆ ಕಡೆಯಿಂದ ಮಾವು ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ಪತ್ತೆಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ. ಸುಮಾರು 4 ಲಕ್ಷ ರೂ. ವೌಲ್ಯದ ವಾಹನ ಮತ್ತು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್., ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ., ಚಿದಾನಂದ ಬಿ., ವಾಹನ ಚಾಲಕ ಜಯರಾಂ, ಅರಣ್ಯ ವೀಕ್ಷಕ ಭಾಸ್ಕರ್ ಡಿ. ಪಾಲ್ಗೊಂಡಿದ್ದರು.
ಈ ಪ್ರಕರಣದ ಮುಂದಿನ ತನಿಖೆಯನ್ನು ಮಂಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪರ ನಿರ್ದೇಶನದಂತೆ ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ನಾಯ್ಕರಿಗೆ ವಹಿಸಿದ್ದಾರೆ.