ಉಪ್ಪಿನಂಗಡಿ: ಬೈಕ್‌ಗೆ ಲಾರಿ ಢಿಕ್ಕಿ; ಸವಾರ ಗಂಭೀರ
Update: 2016-09-13 19:51 IST
ಉಪ್ಪಿನಂಗಡಿ, ಸೆ.13: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿರಾಡಿ ಗ್ರಾಮದ ಪುಲ್ಲೊಟ್ಟು ಎಂಬಲ್ಲಿ ಸಂಭವಿಸಿದೆ.
ಪುತ್ತೂರಿನ ಬನ್ನೂರು ನಿವಾಸಿ ಜೈಶನ್ (23) ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ.
ಶಿರಾಡಿಯ ಸಮೀಪ ಹೆದ್ದಾರಿಯಲ್ಲಿ ಜೈಶನ್ ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.