×
Ad

ಸೆ.14ರಿಂದ ದಾರುಲ್ ಇರ್ಶಾದಿನಲ್ಲಿ ಖಗೋಳ ವಿಜ್ಞಾನ ಅಧ್ಯಯನ ಶಿಬಿರ

Update: 2016-09-13 20:07 IST

ಮಾಣಿ, ಸೆ.14 : ಇಸ್ಲಾಮೀ ವಿಜ್ಞಾನದ ವೈವಿದ್ಯ ವಿಚಾರಗಳ ಕುರಿತಾದ ಸರಣಿ ತರಗತಿಗಳನ್ನು ಆಯೋಜಿಸಲು ದಾರುಲ್ ಇರ್ಶಾದ್ ವಿದ್ಯಾಸಂಸ್ಥೆ ತೀರ್ಮಾನಿಸಿದ್ದು, ಅದರ ಮೊದಲ ಭಾಗವೆಂಬಂತೆ ಖಗೋಳ ವಿಜ್ಞಾನ ತರಗತಿಯು ಸೆ.14ರಂದು ಆರಂಭಗೊಳ್ಳಲಿದೆ. ಇದರ ಮೂಲಕ ನಮಾಝಿನ ವೇಳೆ ಮತ್ತು ಖಿಬ್ಲ ದಿಶೆ ಕಂಡುಹಿಡಿಯಲು ಸಹಾಯಕವಾಗುತ್ತದೆ.

ಮೊದಲ ಹಂತದ ತರಗತಿಯು ಒಂದು ವಾರ ನಿರಂತರವಾಗಿ ನಡೆಯಲಿರುವುದು. ಇದೇ ವಷಯದ ಕುರಿತಾಗಿ ಎರಡನೆ ಹಂತದ ತರಗತಿಯೂ ಡಿಜಿಟಲ್ ತಂತ್ರಜ್ಞಾನದ ರೂಪದಲ್ಲಿ ಒಂದು ತಿಂಗಳ ನಂತರ ನಡೆಯಲಿದೆ. ಮೂರನೇ ಹಂತದಲ್ಲಿ ಇದೇ ವಿಷಯದಲ್ಲಿ ಪರೀಕ್ಷೆ ನಡೆಸಲಾಗುವುದು. ಈ ತರಗತಿಗೆ ಸತ್ತಾರ್ ಸಖಾಫಿ ಮಂಜೇರಿ ನೇತೃತ್ವ ನೀಡಲಿದ್ದಾರೆ.

ಒಂದನೆಯ ಹಂತದ ತರಗತಿಗೆ  ಉಲಮಾಗಳ ಆಯ್ಕೆ ನಡೆದಿದ್ದು, ಎರಡನೇ ಹಂತದಲ್ಲಿ ಆಸಕ್ತರಿಗೆ ಅವಕಾಶವನ್ನು ನೀಡಲಾಗುವುದು ಎಂದು ದಾರುಲ್ ಇರ್ಶಾದ್ ಆಡಳಿತ ಮಂಡಳಿಯ ಮುಖ್ಯ ವ್ಯವಸ್ಥಾಪಕ ಮುಹಮ್ಮದ್ ಶರೀಫ್ ಸಖಾಫಿ ಮಾಣಿ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News