ಜನನಿ ಮಹಿಳಾ, ಮಕ್ಕಳ ಟ್ರಸ್ಟ್‌ನಿಂದ ಸ್ಪಷ್ಟೀಕರಣ
ಮಂಗಳೂರು, ಸೆ. 13: ಸಾರ್ವಜನಿಕರಿಗೆ ಲಕ್ಷಾಂತರ ರೂ. ವಂಚಿಸಿದ ಆರೋಪವನ್ನು ಎದುರಿಸುತ್ತಿರುವ ಹಸೀನಾ ನಮ್ಮ ಟ್ರಸ್ಟ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ಜನನಿ ಮಹಿಳಾ ಮತ್ತು ಮಕ್ಕಳ ಟ್ರಸ್ಟ್‌ನ ಅಧ್ಯಕ್ಷೆ ಗೀತಾ ಕೆ. ಉಚ್ಚಿಲ ತಿಳಿಸಿದ್ದಾರೆ.
ಹಸೀನಾರ ಪೂರ್ವಾಪರ ಗೊತ್ತಿಲ್ಲದ್ದಿದ್ದರೂ ಕಳೆದ ಮೂರು ತಿಂಗಳಿಂದ ಅವರ ಸಮಾಜಮುಖಿ ಕಾರ್ಯಗಳನ್ನು ಗಮನಿಸಿ ನಾವು ಅವರನ್ನು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದೆವು. ಅವರ ಮೇಲೆ ಸಾರ್ವಜನಿಕರಿಗೆ ವಂಚಿಸಿದ ಆರೋಪ ಕಂಡು ಬಂದ ಹಿನ್ನೆಲೆಯಲ್ಲಿ ನಾವು ತುರ್ತುಸಭೆ ನಡೆಸಿದಾಗ ಅವರು ಸ್ವತಃ ರಾಜೀನಾಮೆ ಪತ್ರವನ್ನು ಕಳುಹಿಸಿದ್ದು, ಅದನ್ನು ನಾವು ಅಂಗೀಕರಿಸಿದ್ದೇವೆ. ನಮ್ಮ ಸಂಸ್ಥೆಯ ತೇಜೋವಧೆಗೆ ಯತ್ನಿಸಿದ ಸಾಮಾಜಿಕ ಕಾರ್ಯಕರ್ತರಾದ ಕಮಲಾಕ್ಷ, ರೇಣುಕಾ, ಪದ್ಮಿನಿ ರೈ ಮುಂತಾದವರು ನಮ್ಮನ್ನು ಸಂಪರ್ಕಿಸದೆ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ನಮಗೆ ಆಘಾತವನ್ನುಂಟು ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.