×
Ad

ಕುಡಿತದ ಮತ್ತಿನಲ್ಲಿ ಮಹಿಳೆಗೆ ಬೆದರಿಕೆ

Update: 2016-09-13 23:55 IST

ಮಂಗಳೂರು, ಸೆ.13: ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಚೂರಿ ತೋರಿಸಿ ಬೆದರಿಕೆ ಹಾಕಿದ ಘಟನೆ ಸೋಮವಾರ ಕುಲಶೇಖರ ಸಮೀಪದ ಕಲ್ಪನೆಯ ಕುಚ್ಚಿಕಾಡ್ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಕುಚ್ಚಿಕಾಡ್‌ನ ರಮೇಶ್(50) ಎಂದು ಗುರುತಿಸಲಾಗಿದೆ. ರಮೇಶ್ ಎರಡು ದಿನಗಳಿಂದ ಪಕ್ಕದ ಮನೆಯ ಕೆಲಸದ ಯುವತಿಗೆ ಕಿರುಕುಳ ನೀಡುತ್ತಿದ್ದು, ಸೋಮವಾರ ಮತ್ತೆ ಬಂದಿದ್ದ ಎನ್ನಲಾಗಿದೆ. ಮನೆಯೊಡತಿ ವಿಷಯವನ್ನು ತನ್ನ ಪತಿಗೆ ತಿಳಿಸಿದ್ದು, ಅವರು ಆತನನ್ನು ಬೈದು ಕಳುಹಿಸಿದ್ದಾರೆ. ತನ್ನ ಮನೆಗೆ ಹೋಗಿ ರಮೇಶ್ ಚೂರಿಯನ್ನು ಹಿಡಿದು ಮತ್ತೆ ವಾಪಸ್ ಬಂದು ಯುವತಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮನೆ ಮಂದಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ರಮೇಶನನ್ನು ವಶಕ್ಕೆ ತೆಗೆದುಕೊಂಡು ಬಳಿಕ ಕದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. ಕದ್ರಿ ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News