ತುರವೇಯಿಂದ ಆ್ಯಂಬುಲೆನ್ಸ್ ಸೇವೆ ಆರಂಭ
ಮಂಗಳೂರು, ಸೆ.14: ತುಳುನಾಡ ರಕ್ಷಣಾ ವೇದಿಕೆ(ತುರವೇ)ಯಿಂದ ‘ನಮ್ಮ ಆ್ಯಂಬ್ಯುಲೆನ್ಸ್ ಜನರ ಸೇವೆಗೆ’ ಎಂಬ ಧ್ಯೇಯವಾಕ್ಯದಡಿ ಆರಂಭಿಸಲಾದ ನೂತನ ಆ್ಯಂಬ್ಯುಲೆನ್ಸ್ ಸೇವೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳೂರು ಉಪ ಪೊಲೀಸ್ ಆಯುಕ್ತ ಕೆ.ಎಂ.ಶಾಂತರಾಜು ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ಯಾಂಕ್ ಸಾಲ ಮತ್ತು ಸ್ವಂತ ನಿಧಿಯನ್ನು ಬಳಸಿ ಆ್ಯಂಬುಲೆನ್ಸ್ ಸೇವೆ ನೀಡುತ್ತಿರುವ ತುರವೇ ಅವರ ಕಾರ್ಯ ಶ್ಲಾಘನೀಯ. ಈ ಆ್ಯಂಬುಲೆನ್ಸ್ ಸೇವೆಯಿಂದ ಹೆಚ್ಚಿನ ಪ್ರಾಣ ರಕ್ಷಣೆ ಆಗಲಿ ಎಂದರು.
ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮನಪಾ ಸದಸ್ಯ ಲತೀಫ್ ಕಂದಕ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಸಂತೋಷ್‌ಕುಮಾರ್ ಬೋಳಿಯಾರ್, ಆರೋಗ್ಯ ಇಲಾಖೆಯ ಅಧಿಕಾರಿ ರಾಜೇಶ್, ತುರವೆ ಮುಖಂಡರಾದ ಹಮೀದ್ ಹಸನ್ ಮಾಡೂರು, ಸಿರಾಜ್ ಅಡ್ಕರೆ, ಪ್ರಶಾಂತ ಭಟ್ ಕಡಬ, ಜ್ಯೋತಿಕಾ ಜೈನ್ ಉಪಸ್ಥಿತರಿದ್ದರು.